ಮತ ಚಾಲಹಿಸಿದ ಮಾಜಿ ಪ್ರಧಾನಿ ಎಚ್'ಡಿಡಿ , ಸರ್ಕಾರ ರಚನೆ ಬಗ್ಗೆ ಭವಿಷ್ಯ



ಕರ್ನಾಟಕ ವಿಧಾನಸಭೆ ಚುನಾವಣೆ ಈಗಾಗಲೇ ಆರಂಭಗೊಂಡಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಮತದಾರರು ಬೆಳಗ್ಗೆ 7 ರಿಂದಲೇ ಬಂದು ಮತ ಚಲಾಯಿಸುತ್ತಿದ್ದಾರೆ. "ನಾವು ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದ್ದೇವೆ" ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಹಾಸನದ ಹೊಳೆನರಸಿಪುರದ ಮತಗಟ್ಟೆ ಸಂಖ್ಯೆ 224 ರಲ್ಲಿ ಮತಚಲಾಯಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, 'ನಾವು ಉತ್ತಮ ಪ್ರಚಾರ ಮಾಡಿದ್ದೇವೆ. ಮತದಾರರು ನಮ್ಮ ಬಗ್ಗೆ ಒಲವು ತೋರಲಿದ್ದಾರೆ. ಈ ಬಾರಿ ನಾವೇ ಸರ್ಕಾರ ರಚಿಸುತ್ತೇವೆ' ಎಂದು ಭವಿಷ್ಯ ನುಡಿದರು. ಮತಗಟ್ಟೆ ಸಂಖ್ಯೆ 224 ರಲ್ಲಿ ಪತ್ನಿ ಚೆನ್ನಮ್ಮ, ಪುತ್ರ ಎಚ್.ಡಿ. ರೇವಣ್ಣ ಮತ್ತು ಕುಟುಂಬದ ಇತರ ಸದಸ್ಯರೊಂದಿಗೆ ತೆರಳಿ ದೇವೇಗೌಡರು ಮತ ಚಲಾಯಿಸಿದರು.
Comments