ಮತದಾರ ಪ್ರಭುವಿಗೊಂದು ಕಿವಿಮಾತು
ಮತಗಟ್ಟೆಯ ಹೊಸ್ತಿಲಲ್ಲಿ ನಿಂತಿರುವ ಮತದಾರ ಬಂಧುಗಳೇ ಮತದಾನಕ್ಕಾಗಿ ನಿಮ್ಮನ್ನು ಹತ್ತು ಹಲವು ಆಮಿಷಗಳನ್ನು ನೀಡಿದರೆ ಅದನ್ನು ಸ್ವೀಕರಿಸಿ ಆದರೆ ತಮ್ಮ ಮತವನ್ನು ಯೋಗ್ಯ ವ್ಯಕ್ತಿಗೆ ಮತ ನೀಡಿ. ಈಗಾಗಲೇ ಕೆಲವು ರಾಜಕಾರಣಿಗಳು ಅಧಿಕಾರದಲ್ಲಿದ್ದ ಸಮಯದಲ್ಲಿ ಯಾವುದೇ ಕೆಲಸವನ್ನು ಮಾಡದೇ ಕೇವಲ ಹಣ ಹೆಂಡ ಇತರೆ ಆಮಿಷಗಳಿಂದ ಮತವನ್ನು ಪಡೆಯಬಹುದು ಎಂಬುದನ್ನು ತಿಳಿದ ರಾಜಕಾರಣಿಗಳಿಗೆ ಸರಿಯಾಗಿ ಬುದ್ದಿ ಕಲಿಸುವ ಸಮಯ ಬಂದಿದ್ದು ಅದನ್ನು ಬಳಸಿಕೊಳ್ಳಬೇಕಾಗಿದೆ. ಇನ್ನು ಕೇವಲ ಅಭ್ಯರ್ಥಿಯನ್ನು ಮಾತ್ರ ಪರಿಗಣಿಸದೆ ಪಕ್ಷದ ಮುಖಂಡರನ್ನು ಪರಿಗಣಿಸಿ ಮತದಾನ ಮಾಡಿ. ಕೆಲವು ರಾಜಕಾರಣಿಗಳು ಕಾರ್ಯಕರ್ತರ ಮೂಲಕ ಹತ್ತು ಹಲವು ಆಮಿಷಗಳನ್ನು ನೀಡಿದರು ಕಾರ್ಯಕರ್ತರ ಮಾತಿಗೆ ಮಣಿಯದೆ ತಮಗೆ ಸೂಕ್ತ ಎನಿಸಿದ ವ್ಯಕ್ತಿಗೆ ಮತ ನೀಡಿ. ನಿಮ್ಮ ಆಯ್ಕೆ ನಾಳಿನ ನಾಡಿನ ಭವಿಷ್ಯವನ್ನು ನಿರ್ಧರಿಸಲಿದೆ ಎಂಬುದನ್ನು ಮರೆಯದಿರಿ ಹಣ ಹಂಚಿ ಮತ ಪಡೆಯಬಹುದೆಂಬ ಅಭ್ಯರ್ಥಿ ನಿಲುವನ್ನು ಹುಸಿಗೊಳಿಸಿ ಪ್ರಜಾಪ್ರಭುತ್ವದಲ್ಲಿ ಮತದಾರನೇ ಪ್ರಭು ಎಂಬುದನ್ನು ಸಾಬೀತುಪಡಿಸಿ.
Comments