ಪಂಚಾಂಗದ ಪ್ರಕಾರ ಮುಂದಿನ ಮುಖ್ಯಮಂತ್ರಿ ಇವರೇ…!!



ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಎಲ್ಲಾ ರಾಜಕೀಯ ನಾಕರ ಚಿತ್ತ ಅಧಿಕಾರದತ್ತ, ಅಲ್ಲದೆ ಈ ಬಾರಿ ನಟ- ನಟಿಯರು ಮತ್ತು ರಾಜ್ಯದ ಜನತೆಯ ಒಲವು ಜೆಡಿಎಸ್ ಪರವಾಗಿದ್ದು ಮುಂದಿನ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಎಂಬ ಮಾತು ಕೇಳಿ ಬರುತ್ತಿದೆ.
ಕೆಲವು ಜೋತಿಷಿಗಳು ಹೇಳಿರುವ ಪ್ರಕಾರ ಮುಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈ ಬಾರಿ ಜೆಡಿಎಸ್ ಪಕ್ಷಕ್ಕೆ ಬಹುಮತ ಬರಲಿದೆ. ಹಾಗಾಗಿ ಕುಮಾರಸ್ವಾಮಿ ಅವರೇ ಮುಂದಿನ ಮುಖ್ಯಮಂತ್ರಿಗಳು ಎಂದು ಹೇಳಲಾಗಿದೆ. ಕೋಡಿ ಮಟದ ಸ್ವಾಮಿಜಿಯವರ ಭವಿಷ್ಯದಂತೆ ಈ ಬಾರಿ ಬಹುಮತ ಬರದ ಕಾರಣ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ ಎಂದು ಹೇಳಲಾಗಿದೆ. ಹಾಗಾಗಿ ಕುಮಾರಸ್ವಾಮಿ ಅವರೇ ಮುಂದಿನ ಮುಖ್ಯಮಂತ್ರಿಗಳು ಎಂದು ಹೇಳಲಾಗಿದೆ. ಇನ್ನು ಬಿಜೆಪಿ ಜೊತೆ ಕೈ ಜೋಡಿಸುವುದಕ್ಕೂ ಕುಮಾರಸ್ವಾಮಿಯವರಿಗೆ ಮನಸ್ಸಿಲ್ಲ, ಆದರೆ ಈ ಎರಡೂ ಪಕ್ಷಗಳಲ್ಲದೇಯೂ ಕೂಡ ಸಮ್ಮಿಶ್ರ ಸರ್ಕಾರ ರಚಿಸಲು ಕುಮಾರಸ್ವಾಮಿ ಅಂಡ್ ಟೀಂ ಈಗಾಗಲೇ ರಣತಂತ್ರವನ್ನೇ ಹೆಣೆದಿದೆ. ಈಗಾಗಲೇ ಬಿಎಸ್ಪಿ ಮತ್ತು ಎನ್ಸಿಪಿ ಜೊತೆ ಕೈಜೋಡಿಸಿರುವ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳು ಮತ್ತು ಪಕ್ಷೇತರರ ಬೆಂಬಲವನ್ನು ಪಡೆದು ಸರ್ಕಾರ ರಚಿಸಲು ಸದ್ದಿಲ್ಲದೇ ತಯಾರಿ ನಡೆಸಿದೆ. ಈ ಬೆಳವಣಿಗೆಗಳನ್ನು ಗಮನಿಸಿದಾಗ ಕೋಡಿಮಠದ ಸ್ವಾಮೀಜಿಗಳು ಹೇಳಿದಂತೆ ಸಮ್ಮಿಶ್ರಸರ್ಕಾರ ರಚನೆಯಾದರೂ ಕೂಡ ಅದು ಕಾಂಗ್ರೆಸ್ ಮತ್ತು ಬಿಜೆಪಿಯೇತರ ಸರ್ಕಾರವಾಗಲಿದೆ.
16-12-1959 ಬುಧವಾರ 10.30 ಹಾಸನದಲ್ಲಿ ಹಾರದ್ರನಕ್ಷತ್ರ, ಮಿಥುನರಾಶಿ ಎರಡನೇ ಪಾದದಲ್ಲಿ ಜನಿಸಿರುವ ಕುಮಾರಸ್ವಾಮಿಯವರ ಟೈಂ ಚನ್ನಾಗಿದ್ದು ಅವರಿಗೆ ಶುಕ್ರದೆಸೆ ಪ್ರಾರಂಭವಾಗಿದೆ.ಈಗ ಅವರು ಅಂದು ಕೊಂಡದ್ದನ್ನ ಸಾಧಿಸಬಹುದಾಗಿದೆ. ರಾಜ್ಯಾಧ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿರುವ ಕುಮಾರಸ್ವಾಮಿ ಮತ್ತು ದೇವೇಗೌಡರು ಈ ಬಾರಿ ಏನಾದರೂ ಮಾಡಿ 113 ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಹೊರಟಿದ್ದಾರೆ. ಆದರೆ ಅಷ್ಟುಸ್ಥಾನಗಳು ಬರದಿದ್ದರೂ ಕೂಡ ಜೆಡಿಎಸ್ ಇತರರ ಬೆಂಬಲದಿಂದ ಸರ್ಕಾರರಚಿಸಲಿದೆ.
Comments