ತೆನೆ ತೆಕ್ಕೆಗೆ ಬಿದ್ದ ಬಿಜೆಪಿಯ ಮತ್ತೊಂದು ಪ್ರಬಲ ದಳ..!!
ರಾಜ್ಯ ವಿಧಾನಸಭಾ ಚುನಾವಣೆ ಗೆ ಕ್ಷಣಗಣನೆ ಶುರುವಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ. ಈ ಬಾರಿ ಅನ್ಯ ಪಕ್ಷದ ಪ್ರಭಾವಿ ಮುಖಂಡರು ಜೆಡಿಎಸ್ ನತ್ತ ವಲಸೆ ಬಂದಿದ್ದಾರೆ. ಜೆಡಿಎಸ್ ದಿನದಿಂದ ದಿನದಿನಕ್ಕೆ ಪ್ರಬಲಗೊಂಡಿದ್ದು, ಶತಾಯಗತಾಯ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿರುವ ಜೆಡಿಎಸ್ ಭರ್ಜರಿ ಪ್ರಚಾರ ನಡೆಸಿ ಯಶಸ್ವಿಯಾಗಿದ್ದಾರೆ. ಎಲ್ಲೆಡೆ ಜೆಡಿಎಸ್ ಕೂಗು ಕೇಳಿಬರುತ್ತಿದೆ.
ಮಾಜಿ ಮಂತ್ರಿ ಬಸವ್ರಾಜ ಪಾಟೀಲ್ ಅಟ್ಟೂರ್ ರವರು ಬಸವಕಲ್ಯಾಣದಲ್ಲಿ ಬಿಜೆಪಿ ತೊರೆದು ಸಾವಿರಾರು ಕಾರ್ಯಕರ್ತರ ಜೊತೆ ಮಾತೃ ಪಕ್ಷ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ. ಈ ಚುನಾವಣೆಯಲ್ಲಿ ಪಿ.ಜಿ.ಆರ್ ರವರನ್ನು ಗೆಲ್ಲಿಸಿ ಕುಮಾರಣ್ಣ ನನ್ನು ಮುಖ್ಯಮಂತ್ರಿ ಮಾಡುವರೆಗೂ ವಿಶ್ರಮಿಸುವುದಿಲ್ಲ ಎಂದು ಘೋಷಣೆ ಮಾಡಿದರು. ಈ ಎಲ್ಲಾ ಬೆಳವಣಿಗೆ ಅನುಸಾರ ಈ ಬಾರಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಮೂಲಗಳು ತಿಳಿಸಿವೆ.
Comments