26ನೇ ವರ್ಲ್ಡ್ ರಿದಮಿಕ್ ಯೋಗ ಸ್ಪರ್ಧೆಯಲ್ಲಿ ಗಾನಶ್ರೀ ಪ್ರಥಮ
ಬ್ರೆಜಿಲ್ ದೇಶದ ಅರ್ಜಂಟೈನಾ ನಗರದಲ್ಲಿ ನಡೆಯುತ್ತಿರುವ 26ನೇ ವಲ್ಡ್೯ಯೋಗ ಛಾಂಪಿಯಷಿಪ್ ನಲ್ಲಿ ನಮ್ಮ ಊರಿನ ಅಂತರರಾಷ್ಟ್ರೀಯ ಯೋಗಪಟು ಗಾನಶ್ರೀ ಎ.ಗೌಡ ರಿದಮಿಕ್ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾಳೆ, ಈಕೆಯ ಜೊತೆಯಲ್ಲಿ ನೆರೆಯ ಆಂಧ್ರಪ್ರದೇಶದ ಜೋಷ್ಣವಿ ಕೂಡ ಪ್ರಥಮ ಸ್ಥಾನ ಗಳಿಸಿದ್ದಾಳೆ, ಊರಿನ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರ ಮಟ್ಟದಲ್ಲಿ ಹಾರಿಸಿದ ಗಾನಶ್ರೀಗೆ ನಗರದ ನಾಗರೀಕರ ಪರವಾಗಿ ಅಭಿನಂದನೆಗಳು.
Comments