ಗಾಂಧಿನಗರದಲ್ಲಿ ದಿನೇಶ್ ಗುಂಡೂರಾವ್ ಗೆ ದೊಡ್ಡ ಹೊಡೆತ! ಜೆಡಿಎಸ್ ಸೇರಿದ ಪ್ರಭಾವಿ ‘ಕೈ’ ಮುಖಂಡ



ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಎಲ್ಲಾ ಪಕ್ಷದವರು ಕೂಡ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ. ರಾಜಕೀಯದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಎಲ್ಲರೂ ಕೂಡ ಹರಸಾಹಸ ಪಡುತ್ತಾ ಇದ್ದಾರೆ. ಚುನಾವಣೆಯ ಫಲಿತಾಂಶ ಬಂದ ಮೇಲೆಯೆ ಯಾವ ಪಕ್ಷ ಅಧಿಕಾರಕ್ಕೆ ಬಂದು ಯಾವ ಪಕ್ಷಕ್ಕೆ ಬಿಗ್ ಶಾಕ್ ಕೊಡುತ್ತೋ ಅನ್ನೋದನ್ನ ಇನ್ನೂ ಕೆಲವು ದಿನ ಕಾದು ನೋಡ ಬೇಕು..ಆದರೆ ಚುನಾವಣೆ ಫಲಿತಾಂಶ ಹೊರ ಬರುವ ಮೊದಲೇ ಕಾಂಗ್ರೆಸ್ ಗೆ ಬಿಗ್ ಶಾಕ್ ಕೊಟ್ಟಂತಾಗಿದೆ.
ಹೌದು.., ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಗೆ ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ. ಕಾಂಗ್ರೆಸ್ ಗೆ ಕೈ ಕೊಟ್ಟು ತೆನೆಹೊರಲು ಸಿದ್ದರಾಗಿದ್ದಾರೆ. ಈಗಾಗಲೇ ಸಾಕಷ್ಟು ಮುಖಂಡರು ಕೈ ಗೆ ಕೈ ಕೊಟ್ಟು ತೆನೆ ಹೊತ್ತಿದ್ದಾಗಿದೆ. ಇದೀಗ ಮತ್ತೊಬ್ಬ ಕಾಂಗ್ರೆಸ್ ನಾಯಕ ತಮ್ಮ ಪಕ್ಷಕ್ಕೆ ಗುಡ್ ಬಾಯ್ ಹೇಳಿದ್ದಾರೆ. ಬಿನ್ನಿಪೇಟೆಯ ವಾರ್ಡ್ನ ಮಾಜಿ ಕಾರ್ಪೋರೇಟರ್ ನ ಪತಿ ನಾಗರಾಜು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆಯನ್ನು ನೀಡಿದ್ದಾರೆ. ಅಷ್ಟೆ ಅಲ್ಲದೆ ಇಂದು ರಾತ್ರಿ ನಾಗರಾಜು ನಿವಾಸಕ್ಕೆ ಎಚ್.ಡಿ.ದೇವೆಗೌಡರು ಆಗಲಿಸಲಿದ್ದು ಅಭಿಮಾನಿಗಳು ಮತ್ತು ಬೆಂಬಲಿಗರೂ ಬರುವಂತೆ ಕರೆಯನ್ನು ಕೂಡ ನೀಡಿದ್ದಾರೆ. ಆದರೆ ಗಾಂಧಿನಗರದಲ್ಲಿ ಹೆಚ್ಚು ಬೆಂಬಲವಿರುವ ಬಿಟಿಎಸ್ ನಾಗರಾಜು ಜೆಡಿಎಸ್ ಗೆ ಸೇರ್ಪಡೆಯಾಗಿರುವುದರಿಂದ ಕಾಂಗ್ರೆಸ್ ಗೆ ಬಾರಿ ಹಿನ್ನಡೆಯಾಗಿದೆ. ಇದರಿಂದ ದಿನೇಶ್ ಗುಂಡುರಾವ್ ಗೆ ದೊಡ್ಡ ಹೊಡೆತ ಬಿದ್ದಾಂತಾಗಿದೆ. ರಾಜಕೀಯ ಎಂಬ ಚದುರಂಗದ ಆಟದಲ್ಲಿ ದಾಳ ಬೀಡೊರು ರಾಜಕೀಯ ಮುಖಂಡರುಗಳಾದರೆ ಅದನ್ನ ನಿರ್ಧರಿಸುವವರು ನಮ್ಮ ಮತದಾರರು.
Comments