ಕೇಂದ್ರ ಮಂತ್ರಿ ಧರ್ಮೇಂದ್ರ ಪ್ರಧಾನ್ ರವರಿಂದ ಭರ್ಜರಿ ರೋಡ್ ಷೋ
ಇಂದು ಮಧ್ಯಾನ್ಹ 1-30 ಘಂಟೆಗೆ ನಗರದ ಬಯಲು ಬಸವಣ್ಣ ದೇವಸ್ಥಾನದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಜೆ.ನರಸಿಂಹಸ್ವಾಮಿಯವರು ರೋಡ್ ಷೋ ನಡೆಸಲಿದ್ದಾರೆ. ಮೆರವಣಿಗೆಯಲ್ಲಿ ಕೇಂದ್ರ ಮಂತ್ರಿ ಧರ್ಮೇಂದ್ರ ಪ್ರಧಾನ್, ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಯಾಚನೆಮಾಡಿದರು, ಬಸವಣ್ಣ ದೇವಸ್ಥ್ನದಿಂದ ಹೊರಟು ಕೊಂಗಾಡಿಯಪ್ಪಾ ಕಾಲೇಜ್ ಮುಖಾಂತರ ಕನಕದಾಸ ರಸ್ತೆಯಲ್ಲಿ ಸಾಗಿ, ಕುಚ್ಚಪ್ಪನಪೇಟೆ, ಕಾಳಮ್ಮ ದೇವಸ್ಥಾನ, ಚೌಕದ ಮೂಲಕ ಸೌದರ್ಯಮಹಲ್ ವೃತ್ತ, ಸಿದ್ದಲಿಂಗಯ್ಯ ವೃತ್ತ, ಆಸ್ಪತ್ರೆ ಸರ್ಕಲ್, ಗಾಂಧಿ ಪ್ರತಿಮೆ ಮುಂದೆ ಸಾಗಿ ಚಿಕ್ಕಪೇಟೆ, ದೇಶದಪೇಟೆ ಮಾರ್ಗವಾಗಿ ತಾಲ್ಲೂಕು ಕಛೇರಿ ಸರ್ಕಲ್ ನಲ್ಲಿ ಕೊನೆಗೊಂಡಿತು. ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಹನುಮಂತರಾಯಪ್ಪ, ತಾಲ್ಲೂಕು ಅಧ್ಯಕ್ಷ ಲಕ್ಷ್ಮೀಪತಿ, ಬೆಂ.ಗ್ರಾ. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ,ಬೆಂ.ಗ್ರಾ.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಶಂಕರ್, ಕಂಟನಕುಂಟೆ ಕೃಷ್ಣಮೂರ್ತಿ, ಮಹಿಳಾ ಪದಾಧಿಕಾರಿಗಳು, ಮೆರವಣಿಗೆಯಲ್ಲಿ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
Comments