ಚಾಮರಾಜಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲ ಕಂಡು ಬೆಚ್ಚಿಬಿದ್ದ ಜಮೀರ್ ಅಹ್ಮದ್...!!

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದೆ. ಈ ಬಾರಿ ಎಲ್ಲರ ಗಮನ ಸೆಳೆಯುತ್ತಿರುವ ಚಾಮರಾಜಪೇಟೆ ಕ್ಷೇತ್ರದಲ್ಲಿ ರಾಜಕೀಯದ ಕಾವು ಹೆಚ್ಚುತ್ತಿದೆ. ಶತಾಯಗತಾಯ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಶತಾಯಗತಾಯ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನನ್ನು ಬುಡ ಸಮೇತ ಕೀತು ಹಾಕಲು ಮಾಜಿ ಪ್ರಧಾನಿ ದೇವೇಗೌಡರು ಮುಂದಾಗಿದ್ದಾರೆ.
ಜೆಡಿಎಸ್ನಿಂದ ಬಂಡಾಯ ಎದ್ದು ಸತತ 3 ಬಾರಿ ಶಾಸಕನಾಗಿದ್ದ ಜಮೀರ್ ಸದ್ಯ ಕಾಂಗ್ರೆಸ್ ಅಭ್ಯರ್ಥಿ. ಇನ್ನು ಕಾಂಗ್ರೆಸ್ನಲ್ಲಿದ್ದ ಸ್ಥಳೀಯ ನಾಯಕ ಜಮೀರ್ ವಿರೋಧಿ ಎಂದೇ ಬಿಂಬಿತನಾಗಿರೋ ಅಲ್ತಾಫ್ ಖಾನ್ ಜೆಡಿಎಸ್ಗೆ ಬಂದ ಬಳಿಕ ಇಲ್ಲಿನ ಚುನಾವಣಾ ಸಮೀಕರಣವೇ ಬದಲಾಗತೊಡಗಿದೆ. ಈ ಬಾರಿ ಜಮೀರ್ ಅಹ್ಮದ್ ಖಾನ್ಗೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಗೆಲವು ಸುಲಭದ ಹಾದಿಯಲ್ಲ. ಅಲ್ತಾಫ್ ಪತ್ನಿ ಸೀಮಾ ಜೆಜೆನಗರ ವಾರ್ಡ್ನಲ್ಲಿ ಕಾರ್ಪೊರೇಟರ್ ಆಗಿದ್ದಾರೆ. ತಾವೇ ಖುದ್ದಾಗಿ ನಿಂತು ವಾರ್ಡ್ ಕೆಲಸ ಮಾಡ್ಸಿದ್ದಾರೆ. ಸ್ಥಳೀಯರೇ ಆಗಿರೋ ಕಾರಣಕ್ಕೆ ಅಲ್ತಾಫ್ ಪರಿಚಯ ಕ್ಷೇತ್ರದ ಜನಕ್ಕಿದೆ. ಶಾಸಕ ಜಮೀರ್ ಅಹ್ಮದ್ ಅವರನ್ನ ಮಣಿಸಿ ಜೆಡಿಎಸ್ ಬಾವುಟ ಹಾರಿಸುವುದಾಗಿ ಅಲ್ತಾಫ್ ಹೇಳ್ತಿದ್ದಾರೆ.
42 ಕೊಳಗೇರಿಗಳನ್ನು ಹೊಂದಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಲಿನ ಎಲ್ಲಾ ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಸೂಕ್ತ ರೀತಿ ಸ್ಲಂ ಅಭಿವೃದ್ಧಿಪಡಿಸಿಲ್ಲ. ಕುಡಿಯುವ ನೀರಿನ ಸಮಸ್ಯೆ ದೊಡ್ಡ ತಲೆನೋವಾಗಿದೆ. ಕ್ಷೇತ್ರದಲ್ಲಿ ಶಾಸಕ ಜಮೀರ್ ಅಹ್ಮದ್ ಕೈಗೆ ಸಿಗಲ್ಲ ಅಂತಾರೆ ಮತದಾರರು. ಜಮೀರ್ ಅಹ್ಮದ್ ಖಾನ್ ನ ಈ ನಡವಳಿಕೆಗೆ ಬೇಸತ್ತಿರುವ ಕ್ಷೇತ್ರದ ಜನರು ಜೆಡಿಎಸ್ಗೆ ಬೆಂಬಲಿಸುತ್ತಿದ್ದಾರೆ. ಜೆಡಿಎಸ್ ನ ಪ್ರಬಲ ಕಂಡು ಬೆಚ್ಚಿಬಿದ್ದ ಜಮೀರ್ ಅಹ್ಮದ್ ದಿಗ್ಬ್ರಮೆಗೊಂಡಿದ್ದಾರೆ ಎಂದು ಮೂಲಗಲಿ ತಿಳಿಸಿವೆ. ಚಾಮರಾಜಪೇಟೆಯಲ್ಲಿ 7 ವಾರ್ಡ್ ಗಳ ಪೈಕಿ 3 ರಲ್ಲಿ ಕಾಂಗ್ರೆಸ್, ತಲಾ ಎರಡು ವಾರ್ಡ್ ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಪೊರೇಟರ್ ಇದ್ದಾರೆ. ಆದ್ರೂ ಕಾಂಗ್ರೆಸ್ ನಲ್ಲಿದ್ದ ಅಲ್ತಾಫ್ ಜೆಡಿಎಸ್ ಗೆ ಬಂದಿರೋದ್ರಿಂದ ಜೆಜೆನಗರ ಕಾರ್ಪೊರೇಟರ್ ಸೀಮಾ ಅಲ್ತಾಫ್ ಖಾನ್ ಪತಿ ಅಲ್ತಾಫ್ ಗೆ ಬೆಂಬಲ ನೀಡ್ತಿದ್ದಾರೆ. ಅಲ್ಲದೆ ಪರೋಕ್ಷವಾಗಿ ಕೆಲವು ಬಿಜೆಪಿ ಕಾರ್ಪೊರೇಟರ್ ಗಳು ಜೆಡಿಎಸ್ ಅಭ್ಯರ್ಥಿ ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಲಾಗ್ತಿದೆ.
Comments