ಉಚಿತ ನೇತ್ರ ತಪಾಸಣಾ ಶಿಬಿರ 14ನೇ ಸೋಮವಾರದಂದು
ನಗರದಲ್ಲಿರುವ ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಮತ್ತು ದೃಷ್ಠಿ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ದಿನಂಕ 14 ನೇ ಸೋಮವಾರ ಬೆಳಿಗ್ಗೆ 10 ಘಂಟೆಯಿಂದ ಮಧ್ಯಾನ್ಹ 2 ಘಂಟೆಯವರೆಗೆ ದೃಷ್ಠಿ ಕಣ್ಣಿನ ಆಸ್ಪತ್ರೆ, ಮೊದಲನೇ ಮಹಡಿ, ಜಗನ್ನಾಥ ಕಾಂಪ್ಲೆಕ್ಸ್, ಹಳೇ ಬಸ್ ನಿಲ್ದಾಣ, ಇಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ, ಶಿಬಿರದಲ್ಲಿ ಸಕ್ಕರೆ ಖಾಯಿಲೆ/ ರಕ್ತದ ಒತ್ತಡ ಇರುವ ರೋಗಿಗಳಿಗೆ ಅಕ್ಷಿ ಪಟಲ ಪರೀಕ್ಷೆ ನಡೆಸಲಾಗುವುದು, ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಹಾಗೂ ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು ನೀಡಲಾಗುವುದು. ಡಾ|| ವರಲಕ್ಷ್ಮಿ, ಕಣ್ಣಿನ ತಜ್ಞರು, ಪರೀಕ್ಷೆ ನಡೆಸುವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಲು ಟ್ರಸ್ಟ್ ಕಾರ್ಯದರ್ಶಿ ರಮೇಶ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ 9535528830
Comments