ಇಂದು ನಗರದಲ್ಲಿ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್ ರೋಡ್ ಷೋ
ದಿನಾಂಕ 1೦ರ ಗುರುವಾರದಂದು ಬೆಳಿಗ್ಗೆ 11 ಘಂಟೆಗೆ ನಗರದ ಬಯಲು ಬಸವಣ್ಣ ದೇವಸ್ಥಾನದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಜೆ.ನರಸಿಂಹಸ್ವಾಮಿಯವರು ರೋಡ್ ಷೋ ನಡೆಸಲಿದ್ದಾರೆ. ಮೆರವಣಿಗೆಯಲ್ಲಿ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್, ಭಾರತೀಯ ಜನತಾ ಪಕ್ಷದ ವಕ್ತಾರರೂ ಹಾಗೂ ಭಾರತ ಸರಕಾರದ ಸ್ಟೇಟ್ ಮಂತ್ರಿ, ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಯಾಚನೆಮಾಡಲಿದ್ದಾರೆ, ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ಮೆರವಣಿಗೆ ಸಾಗಲಿದೆ, ಮೆರವಣಿಗೆಯಲ್ಲಿ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಗ್ರಾ.ಜಿಲ್ಲಾ ಅಧ್ಯಕ್ಷ ಶಿವಶಂಕರ್ ತಿಳಿಸಿದ್ದಾರೆ.
Comments