ನಗರದ ರಸ್ತೆಗಳಲ್ಲಿ ಮುನೇಗೌಡರ ಅಬ್ಬರದ ಪ್ರಚಾರ






ಇಂದು ನಗರದ ಪ್ರಮುಖ ರಸ್ತೆಗಳಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ರೋಡ್ ಷೋ ನಡೆಸಲಾಯಿತು, ದೊಡ್ಡಬಳ್ಳಾಪುರದ ಜನತಾದಳದ ಅಭ್ಯರ್ಥಿ ಬಿ.ಮುನೇಗೌಡರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ತಮ್ಮ ಪಕ್ಷಕ್ಕೆ ಮತ ನೀಡಲು ಕೋರಿದರು. ನಗರ ಮತ್ತು ತಾಲ್ಲೂಕಿನ ಹಳ್ಳಿಗಳಿಂದ ಮುನೇಗೌಡರ ಅಭಿಮಾನಿಗಳು ಆಗಮಿಸಿ ಮೆರವಣಿಯಲ್ಲಿ ಜೈಕಾರ ಹಾಕುತ್ತಾ ಸಾಗಿದರು, ನಗರ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ನಗರ ಜೆಡಿಎಸ್ ಕಾರ್ಯಾದ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್, ತಾಲ್ಲೂಕು ಕಾರ್ಯಾಧ್ಯಕ್ಷ ಕೆಂಪರಾಜು, ನಗರಸಭಾ ಸಾಸ್ಯರಾದ ಗೋವಿಂದರಾಜು, ಶಿವಕುಮಾರ್, ಮಲ್ಲೇಶ್, ಸತ್ಯನಾರಾಯಣ್ ಮತ್ತು ಎಲ್ಲಾ ಪ್ರಮುಖ ನಾಯಕರು ಜೊತೆಯಲ್ಲಿದ್ದರು.
Comments