ಜೆಡಿಎಸ್ ಪರ ಪ್ರಚಾರ ಮಾಡುತ್ತಿರುವ ಪ್ರಖ್ಯಾತ ಸೀರಿಯಲ್ ಸ್ಟಾರ್ಸ್ …!!

09 May 2018 4:31 PM |
2596 Report

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ರಾಜಕೀಯದ ಅಖಾಡ ರಂಗೇರುತ್ತಿದೆ. ವಿಧಾನಸಭಾ ಚುನಾವಣೆ ಹಿನ್ನಲೆ ಎಲ್ಲೆಡೆ ಸ್ಟಾರ್ಸ್ ಗಳ ಭರ್ಜರಿ ಪ್ರಚಾರ ನಡೆಯುತ್ತಿದೆ. ಹಲವು ಸಿನಿಮಾ ಸ್ಟಾರ್ ನಟ-ನಟಿಯರು ಜೆಡಿಎಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಸೀರಿಯಲ್ ಸ್ಟಾರ್ಸ್ ಗಳು ಕೂಡ ಜೆಡಿಎಸ್ ಪರ ಪ್ರಚಾರ ಕೈಗೊಂಡಿದ್ದಾರೆ.

ಮಣ್ಣಿನ ಮಗ ಕುಮಾರಣ್ಣ ಪಕ್ಷದ ಪರ ಸೀರಿಯಲ್ ಸ್ಟಾರ್ಸ್ ಗಳು ಪ್ರಚಾರ ಮಾಡುತ್ತಿದ್ದಾರೆ. ವೀಕ್ಷಕರ ಮನಗೆದ್ದಿರುವ ರಾಧ ರಮಣ ಸೀರಿಯಲ್ ನ ರಮಣ್ ಅಲಿಯಾಸ್ ಸ್ಕಂದ ಅಶೋಕ ಜೆಡಿಎಸ್ ಪರ ಪ್ರಚಾರ ಕೈಗೊಂಡಿದ್ದಾರೆ. ಪುಟ್ಟಗೌರಿ ಮದುವೆಯ ಗೌರಿ ಅಲಿಯಾಸ್ ರಜಿನಿ ಕೂಡ  ಜೆಡಿಎಸ್ ಪರ ಪ್ರಚಾರ ಕೈಗೊಂಡಿದ್ದಾರೆ. ಪ್ರಚಾರದ ವೇಳೆ ಮಾತನಾಡಿದ ರಜಿನಿ “ನಮಗೆ ರಾಜ್ಯಭಾರ  ಮಾಡೋರು ಬೇಕಾಗಿಲ್ಲ. ಕಷ್ಟದಲ್ಲಿರೋ ರೈತರ, ಯುವಕರ , ಮಹಿಳೆಯರ ಕಷ್ಟಗಳಿಗೆ ಸ್ಪಂದಿಸುವ ಮತ್ತು ಅವರ ಜೊತೆಯಲ್ಲಿ ಕೈಹಿಡಿದು ಅವರಿಗೆಲ್ಲಾ ಬದುಕೋಕೆ, ಅವರ  ಜೊತೆ ಜೊತೆಯಲ್ಲಿ ಹೆಜ್ಜೆ ಹಾಕೋ ಒಬ್ಬ ಹೃದಯವಂತ ಬೇಕು ಅದು ನಮ್ಮ ನಿಮ್ಮೆಲ್ಲರ ಕುಮಾರಣ್ಣ ಮಾತ್ರ… ನೀವೆಲ್ಲ ಜೆಡಿಎಸ್ ಗೆ ಮತ ಹಾಕಿ ಎಂದು ಮನವಿ ಮಾಡಿದರು”  ಈ ಬಾರಿ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಈ ಬಾರಿ ಕುಮಾರಣ್ಣ ಗದ್ದುಗೆ ಹಿಡಿಯೋದು ಗ್ಯಾರೆಂಟಿ.

Edited By

Shruthi G

Reported By

hdk fans

Comments