ನಾನು ಯಾವುದೇ ಪಕ್ಷದ ಪರ ಅಲ್ಲ… ನಾನು ಸರ್ಕಾರಿ ನೌಕರ ಚಿಕ್ಕಣ್ಣ
ಕೊರಟಗೆರೆ ಮೇ. 8:-ನಾನು ಯಾವುದೇ ಪಕ್ಷದ ಪರವಾಗಿಲ್ಲ… ಕಚೇರಿಗೆ ರಜೆಯನ್ನು ಹಾಕಿಲ್ಲ ನನ್ನ ಮೇಲೆ ವೈಯಕ್ತಿಕ ದ್ವೇಷದಿಂದ ರಾಜಕೀಯ ಮಾಡುಡಿದ್ದು ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ದಾರೆ ಎಂದು ತಾಲೂಕು ಎಸ್ ಸಿ/ಎಸ್ ಟಿ ಸಮನ್ವಯ ಸಮಿತಿಯ ಅಧ್ಯಕ್ಷ ಕೆ.ಚಿಕ್ಕಣ್ಣ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಮೇ.4 ರಂದು ಒಂದು ಪಕ್ಷದ ಮುಖಂಡರಾಗಿರುವ ಚಿಕ್ಕಣ್ಣ ನಾನು ಮತ್ತೊಂದು ಪಕ್ಷಕ್ಕೆ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ ಎಂದು ವೈಯಕ್ತಿಕ ದ್ವೇಶದಿಂದ ನಾನು ಕಚೇರಿಯಲ್ಲಿ ಕರ್ತವ್ಯನಿರತನಾಗಿದ್ದ ಸಂದರ್ಭದಲ್ಲಿ ನನ್ನ ಮೇಲೆ ಏಕಾಏಕಿ ಚಿಕ್ಕರಂಗಯ್ಯ, ಅವರ ಸ್ನೇಹಿತ ತೆಂಗು ಮತ್ತು ನಾರು ಅಭಿವೃದ್ಧಿ ನಿಗದ ಅಧ್ಯಕ್ಷ ವೆಂಕಟಾಚಲಯ್ಯ, ಭರತ್(ಟಿಂಕು) ಮತ್ತು ಹನುಮಯ್ಯ ಸೇರಿ ನನ್ನ ಮೇಲೆ ಹಲ್ಲೆ ನಡೆಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದು ಈಗಾಗಲೇ ಇವರುಗಳ ಮೇಲೆ ಜಾತಿ ನಿಂಧನೆ ಸೇರಿದಂತೆ ಕಲಂ 143,147,149,353,323,447,504,506 ಕೇಸುಗಳು ಕೊರಟಗೆರೆ ಠಾಣೆಯಲ್ಲಿ ದಾಖಲಿಸಿರುವುದಾಗಿ ಹೇಳಿದರು.
ನಾನು ಒಂದು ಪಕ್ಷ ಕರ್ತವ್ಯ ಲೋಪವೇನಾದರೂ ಮಾಡಿದ್ದರೆ ಸರ್ಕಾರದ ಅಧೀನದಲ್ಲಿ ಕಾನೂನಿನ ಅಡಿಯಲ್ಲಿ ಶಿಕ್ಷೆಯನ್ನು ಕೊಡಿಸಬಹುದಿದ್ದು ಆದರೆ ಏಕಾಏಕಿ ಏಕಪಕ್ಷೀಯವಾಗಿ ಒಬ್ಬ ದಲಿತ ನೌಕರನಾದ ನನ್ನ ಮೇಲೆ ದೌಜನ್ಯ ಎಸಗಿರುವುದರಿಂದ ತಾಲೂಕಿನ ಇತರೆ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹೆದರುತ್ತಿದ್ದು ಈ ರೀತಿ ವರ್ತನೆಗಳು ನಡೆಯದಂತೆ ಅಧಿಕಾರಿಗಳಿಗೆ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಉನ್ನತ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
Comments