ಯಾರನ್ನೂ ನಂಬಬೇಡಿ... ನಿಮ್ಮ ಮತ ಕಾಂಗ್ರೇಸ್ ಗೆ ಇರಲಿ: ಕಾಂಗ್ರೇಶ್ ಜಿಲ್ಲಾಧ್ಯಕ್ಷ ಕೆಂಚಮಾಯ್ಯ
ಕೊರಟಗೆರೆ ಮೇ. 8:- ದಾರಿ ತಪ್ಪಿಸುವವರು… ಆಮಿಷಗಳನ್ನು ಒಡ್ಡುವವರು ನೂರಾರು ಜನ ಬರುತ್ತಾರೆ ಯಾರನ್ನೂ ನಂಬೇಡಿ ಎಂದು ಕಾಂಗ್ರೇಸ್ ಜಿಲ್ಲಾಧ್ಯಕ್ಷ ಹೆಚ್. ಕೆಂಚಮಾರಯ್ಯ ತಿಳಿಸಿದರು. ಪಟ್ಟಣದಲ್ಲಿ ಗುಂಡಾಂಜನೇಯ ಬೀದಿಯಲ್ಲಿರುವ ದಲಿತ ಕಾಲೋನಿಗಳಲ್ಲಿ ಮತಯಾನೆ ಮಾಡಿ ಮಾತನಾಡಿದರು.
ದೀನ.. ದಲಿತರ ಉದ್ದಾರಕ್ಕೆ ಕಾಂಗ್ರೇಸ್ ಪಕ್ಷವನ್ನೇ ಬೆಂಬಲಿಸಬೇಕು… ಇವರಿಂದ ಮಾತ್ರ ನಮ್ಮ ಬದುಕು ಅಸನಾಗುತ್ತದೆ ಬಣ್ಣದ ಮಾತಿಗೆ ಮಾರು ಹೋಗದೇ ಸ್ಪಷ್ಟವಾಗಿ ಈ ಬಾರಿ ಕಾಂಗ್ರೇಸ್ಸನ್ನೇ ಬೆಂಬಲಿಸಿ ಎಂದರು.
ಪರಂ ಸದಾಶಿವ ಆಯೋಗದ ವಿರೋಧಿ ಎಂದು ಯಾರಾದರೂ ಹೇಳಿದರೆ ಅವರನ್ನು ನಿರ್ಲಕ್ಷಿಸಿ… ನಾವೆಲ್ಲರೂ ಎಡಗೈ ಸಮದಾಯವರೇ ಇದ್ದೇವೆ ನಮಗೆಲ್ಲಾ ಅವಕಾಶ ಸಿಕ್ಕಿದೆ ಎಂದರೆ ಅವರ ವಿರೋಧಿಯಾಗಲು ಹೇಗೆ ಸಾಧ್ಯ ಎಂದು
ದಲಿತ ಮುಖಂಡ ಬಿಕ್ಕೆಗುಟ್ಟೆ ವೆಂಕಟೇಶ್ ಮಾತನಾಡಿ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಬೇಕು… ನಮಗೆ ಬದುಕನ್ನು ಕಟ್ಟಿಕೊಡುವವರಿಗೆ ಮತ ಹಾಕಬೇಕು ಈಗಿನ ಸ್ಥಿತಿಯಲ್ಲಿ ಕಾಂಗ್ರೇಸ್ ಪಕ್ಷವನ್ನು ಬಿಟ್ಟು ಬೇರಾವ ಪಕ್ಷದವರು ಸಾಮಾನ್ಯರ ಹಿತವನ್ನು ಕಾಯುವುದಿಲ್ಲ ಅದರಲ್ಲೂ ಪರಮೇಶ್ವರ್ ರಂತ ಉತ್ಕೃಷ್ಟ, ಸಭ್ಯ ರಾಜಕಾರಣಿಯನ್ನು ನಿರ್ಲಕ್ಷ ಮಾಡದೇ ಅವರಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ನರಸೀಯಪ್ಪ, ರಾಜ್ಯ ಶೂದ್ರಸೇನೆಯ ಕಾರ್ಯಾಧ್ಯಕ್ಷ ದಿಲೀಪ್, ಮಾಜಿ ಕಸಾಪ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಗೋಪಿನಾಥ್,ಶಶೀಧರ್, ಮುದ್ದಪ್ಪ, ಬ್ಯಾಲ್ಯ ಅಫಿಜ್, ಆಸೀಪ್, ನವೀನ್ ಸೇರಿದಂತೆ ಇತರರು ಇದ್ದರು.
Comments