ಎಲ್ಲರ ಹಿತ ಕಾಯಲು ಜೆಡಿಎಸ್ ಪಕ್ಷವನ್ನು ಬೆಂಬಲಿ.... ಇದು ನಿಮ್ಮ ಪಕ್ಷ... ಶಾಸಕ ಪಿ.ಆರ್ ಸುಧಾಕರ್ ಲಾಲ್

08 May 2018 8:25 PM |
686 Report

ಕೊರಟಗೆರೆ:- ಜೆಡಿಎಸ್ ಪಕ್ಷ ಮಾಡುವುದನ್ನೇ ಹೇಳುವುದು... ಹೇಳುವುದನ್ನೇ ಮಾಡುವುದು ಪ್ರಣಾಣಿಕಯಲ್ಲಿ ನೀಡಿರುವುದು ಆಶ್ವಾಸನೆಯಲ್ಲ... ಜನರ ಆಶಯಗಳು ಇದು ನಮ್ಮ ಪಕ್ಷದ ಕಲ್ಪನೆ ಎಂದು ಶಾಸಕ ಪಿ.ಆರ್ ಸುಧಾಕರ್ ಲಾಲ್ ತಿಳಿಸಿದರು. ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಹುಲೀಕುಂಟೆ ಮತ್ತು ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ಮತಯಾಚನೆ ಮತ್ತು ರೋಡ್ ಶೋ ನಡೆಸಿ ಮಾತನಾಡಿದರು.

      ಅಧಿಕಾರಕ್ಕೆ ಬಂದ 24 ಘಂಟೆಯೊಳಗೇನೇ... ರೈತರ ಎಲ್ಲಾ ಬ್ಯಾಂಕ್ ಗಳ ಸಾಲ ಮನ್ನಾ....ಇಡೀ ರಾಜ್ಯದಲ್ಲಿರುವ  ಸ್ತ್ರೀಶಕ್ತಿ ಸಂಘದ ಮಹಿಳೆಯರು ಮಾಡಿರುವ 4200 ಕೋಟಿ ಸಾಲ ಮನ್ನಾ  
ಮಹಿಳೆಯರು ಸ್ವಾವಲಂಭಿ ಬದುಕನ್ನು ರೂಪಿಸುವ  ಹಿನ್ನೆಲೆಯಲ್ಲಿ ಆರ್ಥಿಕ ಸದೃಡತೆ ಸೇರಿದಂತೆ  ಪ್ರತಿಯೊಂದು ಸ್ತ್ರೀಶಕ್ತಿ ಸಂಘಗಳಿಗೆ 5ಲಕ್ಷದ ವರೇಗೆ ಬಡ್ಡಿರಹಿತ ಸಾಲವನ್ನು ನೀಡುತ್ತಾರೆ. ಪ್ರತಿ ಗರ್ಭಿಣಿ ಮಹಿಳೆಗೆ 6ತಿಂಗಳ ವರೆಗೆ 36 ಸಾವಿರ ನೀಡಲು ಘೋಷಣೆ  ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಪ್ರತಿತಿಂಗಳು 2ಸಾವಿರ ನೀಡುವ ಭರವಸೆವನ್ನು ಜೆಡಿಎಸ್ ಪಕ್ಷ ನೀಡಿ ದ್ದು ಇದೆಲ್ಲವೂ ನಾವು ನನಸ್ಸುಮಾಡುವವರಿದ್ದೇವೆ ಎಂದರು. 

     ಜೆಡಿಎಸ್ ಜಿಲ್ಲಾ  ಪ್ರಧಾನ  ಕಾರ್ಯರ್ಶಿ ಹೆಚ್.ಕೆ ಮಹಾಲಿಂಗಪ್ಪ ಮಾತನಾಡಿ ಕ್ಷೇತ್ರದ ಕೊರಟಗೆರೆ ಮನೆಮಗ ಸುಧಾಕರಲಾಲ್ ಯಾವುದೇ ಕುತಂತ್ರದಿಂದ ಜಯಗಳಿಸಿಲ್ಲ... ಕ್ಷೇತ್ರದಲ್ಲಿ   20 ವರ್ಷದಿಂದ ಮಾಡಿರುವ ಜನಸೇವೆಯಿಂದ ಜಯಗಳಿಸಿದ್ದಾರೆ.... ಕೊರಟಗೆರೆ ಕ್ಷೇತ್ರದಲ್ಲಿ ಈ ಬಾರಿ  ಯಾವುದೇ ಕುತಂತ್ರ ರಾಜಕೀಯ ನಡೆಯೋದಿಲ್ಲ. ಕ್ಷೇತ್ರದ ಜನರು   ಮತ್ತೊಮ್ಮೆ ಸ್ಥಳೀಯ ಮನೆಮಗ ಎಂದು ಹೆಸರು ಗಳಿಸಿರುವ  ಶಾಸಕ ಸುಧಾಕರಲಾಲ್ ರನ್ನೇ  ಕೈಹಿಡಿಯಲಿದ್ದಾರೆ  ಎಂದು ವಿಶ್ವಾಸ ವ್ಯಕ್ತಪಡಿಸಿದರು.

       ಜಿಪಂ ಸದಸ್ಯೆ ಪ್ರೇಮಾ ಮಾತನಾಡಿ ಸತತ ಮೂರು ವರ್ಷದ ಬರಗಾಲದ ನಡುವೆಯೂ ಕೊರಟಗೆರೆ ಕ್ಷೇತ್ರದಲ್ಲಿ 2013ರಿಂದ 2018ರ 5ವರ್ಷದ ಅವಧಿಯೊಳಗೆ 356ಗ್ರಾಮದ ಒಂದು ಕಡೆಯೂ ಕುಡಿಯುವ ನೀರಿನ ಸಮಸ್ಯೆ ಮತ್ತು ಮೂಲಸೌಕರ್ಯಕ್ಕೆ ಕೊರತೆ ಆಗಿಲ್ಲ. ಗ್ರಾಮೀಣ ಪ್ರದೇಶದ ಸಾಮಾನ್ಯಜನರ ದೂರವಾಣಿ ಕರೆಗೆ ತಕ್ಷಣ ಸ್ಪಂಧಿಸುವ ರಾಜ್ಯದ ಏಕೈಕ ಶಾಸಕ ನಮ್ಮ ಸುಧಾಕರಲಾಲ್. ನಮ್ಮ ನಡುವೆ ಸದಾ ಇರುವ ಜನಸೇವಕನನ್ನು ಉಳಿಸಿಕೊಳ್ಳಲು ನಮ್ಮೆಲ್ಲರ ಮತವನ್ನು ಜೆಡಿಎಸ್ ಪಕ್ಷಕ್ಕೆ ಹಾಕಿ ಲಾಲ್ ರನ್ನು ವಿಧಾನ ಸೌಧಕ್ಕೆ ಮತ್ತೊಮ್ಮೆ ಕಳೂಹಿಸಬೇಕು ಎಂದು ಮನವಿ ಮಾಡಿದರು. 
       ಹುಲೀಕುಂಟೆ ಮತ್ತು ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ಬೋಡಬಂಡೇನಹಳ್ಳಿ, ಗೌರಗಾನಹಳ್ಳಿ, ಹುಲೀಕುಂಟೆ, ಗುಂಡಿನಪಾಳ್ಯ, ಗಂಟಿಗಾನಹಳ್ಳಿ, ಸೋಣ್ಣೇನಹಳ್ಳಿ, ಹರಿಹರಪ್ಪನಪಾಳ್ಯ, ಕಾಮರಾಜನಹಳ್ಳಿ, ಬಜ್ಜನಹಳ್ಳಿ, ಕೆಳಗರಹಳ್ಳಿ, ದೀನ್ನೇಪಾಳ್ಯ, ಕಾಡುದಾಸಯ್ಯನಪಾಳ್ಯ, ಹಂಚಿಹಳ್ಳಿ, ನಾಗೇನಹಳ್ಳಿ, ದೇವರಹಳ್ಳಿ, ಓಬಳದೇವರಹಳ್ಳಿ ಗ್ರಾಮ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜಿಪಂ ಸದಸ್ಯೆ ಪ್ರೇಮಾಮಹಾಲಿಂಗಪ್ಪ ಮತ್ತು ಶಾಸಕ ಪಿ.ಆರ್.ಸುಧಾಕರಲಾಲ್ ಮತಯಾಚನೆ ಮಾಡಿದರು.
     ಮತಯಾಚನೆಯಲ್ಲಿ ತಾಲೂಕು ಜೆಡಿಎಸ್ ಉಪಾಧ್ಯಕ್ಷ ಜಿ.ಎಂ ಕಾಮರಾಜು, ಯುವ  ಅಧ್ಯಕ್ಷ ಕೋಡ್ಲಹಳ್ಳಿ ವೆಂಕಟೇಶ್,ಮಹಿಳಾಧ್ಯಕ್ಷ ಸಿದ್ದಗಂಮ್ಮ, ಕಾರ್ಯಾಧ್ಯಕ್ಷೆ ಶಶಿಕಲಾ, ಮಾಜಿ ತಾ.ಪಂ ಸದಸ್ಯ ಎಲ್.ವಿ ಪ್ರಕಾಶ್, ಕೆಎಂಎಫ್ ಮಾಜಿ ನಿರ್ದೇಶಕ  ಗುಂಡಿನಪಾಳ್ಯ ಈಶ್ವರಯ್ಯ, ಹುಲೀಕುಂಟೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹೆಚ್.ಆರ್ ಶ್ರೀಧರ್, ಮುಖಂಡರಾದ ನಂಜಪ್ಪ, ಶಾಂತಮ್ಮ, ರಾಜು, ರಂಗನಾಥ, ಅವಿನಾಶ್,  ಮೀಸೆ ರಮೇಶ್, ಸಂಜೀವರಾಯಪ್ಪ, ಪುಟ್ಟಯ್ಯ, ನಟರಾಜು, ನವೀನ,  ಕಾಕಿಮಲ್ಲಯ್ಯ,   ಜಿ.ಸಿ.ಗೌಡ, ನಾಗಭೂಷನ್, ರಹೀಂ, ಜನಾರ್ಧನ, ಚಂದ್ರು, ಸುರೇಶ, ವೀರಭದ್ರಯ್ಯ, ಸೇರಿದಂತೆ ಇತರರು ಇದ್ದರು. 

Edited By

Raghavendra D.M

Reported By

Raghavendra D.M

Comments