'ಕೈ' ಪಕ್ಷಕ್ಕೆ ಬಿಗ್ ಶಾಕ್ ಕೊಟ್ಟ ಜೆಡಿಎಸ್...!!
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಅಖಾಡ ರಂಗೇರುತ್ತಿದೆ. ಎಲ್ಲಾಕಡೆಗಳಲ್ಲೂ ಕೂಡ ಬಿರುಸಿನ ಪ್ರಚಾರ ನಡೆಯುತ್ತಲಿದೆ.
ರಾಜಕೀಯ ಎಂಬ ಚದುರಂಗದ ಆಟದಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದು ಗದ್ದುಗೆ ಮೇಲೆ ಕೂರಲು ಒಂದಲ್ಲ ಒಂದು ರೀತಿಯ ತಂತ್ರಗಳನ್ನು ನಡೆಸುತ್ತಲೆ ಬಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಇದೀಗ ಅತಂತ್ರ ಫಲಿತಾಂಶ ಬರಲಿದ್ದು, ಜೆ.ಡಿ.ಎಸ್. ಕಿಂಗ್ ಮೇಕರ್ ಆಗಲಿದೆ ಎಂದು ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಜೆ.ಡಿ.ಎಸ್. ಬೆಂಬಲ ಯಾರಿಗೆ ಸಿಗಲಿದೆ ಎಂಬ ಚರ್ಚೆಯು ಕೂಡ ಸಾಕಷ್ಟು ನಡೆದಿದೆ. ಆದರೆ, ಅದೆಲ್ಲಾ ಚುನಾವಣೆ ನಡೆದು ಫಲಿತಾಂಶ ಬಂದ ಮೇಲಿನ ಮಾತು. ಆದರೆ ಇದೀಗ ಜೆ.ಡಿ.ಎಸ್. ಕಾಂಗ್ರೆಸ್ ಗೆ ಬಿಗ್ ಶಾಕ್ ಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಅಲ್ಪಸಂಖ್ಯಾತ ಮತಗಳ ಬುಟ್ಟಿಗೆ ಇದೀಗ ಜೆ.ಡಿ.ಎಸ್. ಕೈಹಾಕಿದೆ. ಇವತ್ತಿನಿಂದ 2 ದಿನಗಳ ಕಾಲ ಅಲ್ಪಸಂಖ್ಯಾತ ಮತಗಳು ಹೆಚ್ಚಾಗಿರುವ ಕಡೆಗಳಲೆಲ್ಲಾ ಎ.ಐ.ಎಂ.ಐ.ಎಂ. ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಚಾರವನ್ನು ಕೈಗೊಂಡಿದ್ದು ಜೆ.ಡಿ.ಎಸ್. ಪರ ಮತಯಾಚನೆಯನ್ನು ಮಾಡಲಿದ್ದಾರೆ. ಬೆಳಗಾವಿ, ಕಾಗವಾಡ, ತಾಳಿಕೋಟೆ ಮತ್ತು ದಾವಣಗೆರೆಯಲ್ಲಿ ಪ್ರಚಾರ ನಡೆಸಲಿರುವ ಓವೈಸಿ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗದಂತೆ ತಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಈ ಬಾರಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿರುವ ಜೆ.ಡಿ.ಎಸ್ ರಾಜ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಎರಡು ಮಾತ್ತಿಲ್ಲ, ಇದಕ್ಕೆ ಸಾಕ್ಷಿ ಸಮಾವೇಶಕ್ಕೆ ಹರಿದು ಬರುತ್ತಿರುವ ಜನಸಾಗರ ಎನ್ನಾಲಾಗಿದೆ. ಅಲ್ಲದೆ ಜೆ.ಡಿ.ಎಸ್ ದಿನದಿಂದ ದಿನಕ್ಕೆ ಪ್ರಬಲಗೋಳುತ್ತಿದ್ದು, ಹಲವು ಅನ್ಯ ಪಕ್ಷದ ಮುಖಂಡರು ಜೆ.ಡಿ.ಎಸ್ ನತ್ತ ವಲಸೆ ಬರುತ್ತಿದ್ದಾರೆ. ಹೀಗಾಗಿ ಜೆ.ಡಿ.ಎಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ರಾಶಿಯ ಮಹಿಳೆಯರು ಪುರುಷರನ್ನು ಬೇಗ ಆಕರ್ಷಿಸುತ್ತಾರಂತೆ..!
Comments