ರೆಬೆಲ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಟಾಂಗ್ ಕೊಟ್ಟ ಎಚ್'ಡಿಕೆ

ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ. ನನ್ನ ವಿರುದ್ಧ ಮಾತನಾಡಲು ಅವನು ಯಾರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಖಾನ್ ಏಕವಚನದಲ್ಲೇ ಕಿಡಿ ಕಾರಿದ್ದಾರೆ.
22 ಲಕ್ಷ ರೂಪಾಯಿ ಹಣ ಹಂಚಿ ಚನ್ನಪಟ್ಟಣದಲ್ಲಿ ಜನ ಸೇರಿಸಿದ್ದಾನೆ. ಸಾಮರ್ಥ್ಯವಿದ್ದರೆ ಹಣ, ತಿಂಡಿ, ವಾಹನವಿಲ್ಲದೆ ಪ್ಯಾಲೇಸ್ ಗ್ರೌಂಡ್‌ನಲ್ಲಿ 5 ಸಾವಿರ ಜನರನ್ನು ಸೇರಿಸಲಿ. ನಾನು ಅವರ ಕಾಲ ಅಡಿಯಲ್ಲಿ ತೂರುತ್ತೇನೆ ಎಂದು ಸವಾಲು ಹಾಕಿದರು. ಕುಮಾರಸ್ವಾಮಿ ಮೇಲೆ ಅಭಿಮಾನದಿಂದ ಜನ ಸೇರುತ್ತಿಲ್ಲ. ಅವರ ಹಣ ಪಡೆದು ಜನ ಸೇರುತ್ತಿದ್ದಾರೆ. ಮೈಸೂರು ಭಾಗದ ನನ್ನ ಸಮುದಾಯದ ಜನರು ನನ್ನನ್ನು ನೋಡಿ ಕಾಂಗ್ರೆಸ್ ಸೇರುತ್ತಾರೆ. ನನ್ನ ಜನರು ಕಾಸಿಗೆ ಬದುಕಿಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಜಮೀರ್ ಅಹ್ಮದ್ ಖಾನ್ ಆಕ್ಷೇಪಾರ್ಹ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬಿರಿಯಾನಿ ಹಾಗೂ ಹಣ ಕೊಟ್ಟು ಜನರನ್ನು ಬಳಸಿಕೊಳ್ಳುವ ಜಮೀರ್ ಅಹ್ಮದ್ ಖಾನ್ ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಇಂಥ ವ್ಯಕ್ತಿಗಳ ಬಾಯಿಯಿಂದ ಬರುವುದೇ ಕೀಳು ಮಟ್ಟದ ಭಾಷೆಯೇ ಹೊರತು, ಒಳ್ಳೆಯ ಭಾಷೆ ನಿರೀಕ್ಷಿಸಲು ಸಾಧ್ಯವಿಲ್ಲ. ಇನ್ನು 10 ದಿನ ಮಾತನಾಡಿಕೊಳ್ಳುತ್ತಾರೆ ಅಷ್ಟೇ. ಖುಷಿಯಾಗಿ ಮಾತನಾಡಿಕೊಳ್ಳಲಿ ಬಿಡಿ’ ಎಂದು ಟಾಂಗ್ ನೀಡಿದ್ದಾರೆ.
Comments