ಸಕ್ಕರೆ ನಾಡಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಕುಮಾರಣ್ಣ
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ರಂಗೇರುತ್ತಿದೆ. ಸಕ್ಕರೆ ನಾಡಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತೆರೆದ ವಾಹನದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದ ಮಹದೇವಪುರ ಗ್ರಾಮದಿಂದ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪರ ರೋಡ್ ಶೋ ನಡೆಸಿದರು.
ಕುಮಾರಸ್ವಾಮಿ ಅವರಿಗೆ ರೋಡ್ ಶೋ ಮಧ್ಯೆ ಜೆಡಿಎಸ್ ಕಾರ್ಯಕರ್ತರು ಬೃಹತ್ ಹಾರ ಹಾಕಿದರು. ಕ್ರೇನ್ ಮೂಲಕ ಬೃಹತ್ ಹಾರ ಹಾಕಲಾಯಿತು. ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪರವಾಗಿ ರೋಡ್ ಶೋ ಆರಂಭಿಸಿದಾಗ ಬಸ್‍ನಿಂದ ಕೆಳಗಿಳಿದು ಪ್ರಚಾರ ಮಾಡಿ. ಅಲ್ಲದೇ ವಾಹನದ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಅಭಿಮಾನಿಗಳು ಕೇಳಿಕೊಂಡಿದ್ದರು. ಈ ವೇಳೆ ಪ್ರಚಾರ ವಾಹನದ ಮೇಲಿದ್ದ ಕುಮಾರಸ್ವಾಮಿ ಕೆಳಗಿಳಿಯಲು ಆಗಲ್ಲ ನಾನಿನ್ನು ಸಾಕಷ್ಟು ಊರುಗಳಿಗೆ ಹೋಗಬೇಕಿದೆ. ಸಮಯಾವಕಾಶದ ಕೊರತೆ ಇದೆ. ಸಿಎಂ ಆದ ನಂತರ ನಿಮ್ಮೂರಲ್ಲೇ ಗ್ರಾಮ ವಾಸ್ತವ್ಯ ಮಾಡುವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಕಾರ್ಯಕರ್ತರ ಮನವೊಲಿಸಿ ಮುಂದೆ ಹೋಗಿದ್ದಾರೆ.
Comments