ಪ್ರಧಾನಿ ಮೋದಿಯವರೆ ಇಂದಿರಾ ಕ್ಯಾಂಟೀನ್ ನಲ್ಲಿ ಒಮ್ಮೆ ಊಟ ಮಾಡಿ...ರಾಹುಲ್ ಗಾಂದಿ






ಇಂದು ದೊಡ್ಡಬಳ್ಳಾಪುರಕ್ಕೆ ತಮ್ಮ ಪಕ್ಷದ ಅಭ್ಯರ್ಥಿ ಟಿ.ವೆಂಕಟರಮಣಯ್ಯನವರ ಪರ ಮತ ಯಾಚಿಸಲು ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂದಿ ಮಾತನಾಡುತ್ತಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು, ರಾಷ್ಟ್ರದಲ್ಲಿ ಏನೇ ನಡೆದರೂ ಪ್ರಧಾನಿಗಳು ಮೌನವಾಗಿರುತ್ತಾರೆ ಮಾತನ್ನೇ ಆಡುವುದಿಲ್ಲ, ವೇಮಲ ಸತ್ತಾ..ಛುಪ್, ಕಥುವಾ ಪ್ರಕರಣ ಛುಪ್, ಯೂ.ಪಿ. ರೇಪ್ ಕೇಸ್..ಛುಪ್, ಎಂದು ಕೀಟಲೆ ಮಾಡಿದರು. ಸುಮ್ಮನೆ ಬಸವಣ್ಣನವರ ಹೆಸರನ್ನು ಹೇಳುತ್ತಾರೆ ಆದರೆ ನುಡಿದಂತೆ ನಡೆಯುವುದಿಲ್ಲಾ, ನಾವು ಹಾಗಲ್ಲ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು. ಸಿದ್ದರಾಮಯ್ಯ ದಿನದ ಇಪ್ಪತ್ತನಾಲ್ಕು ಘಂಟೆ ಕೆಲಸ ಮಾಡುತ್ತಾರೆ, ಸದಾ ರಾಜ್ಯದ ಜನರ ಹಿತ ಬಯಸುತ್ತಾರೆ, ರೈತರ ಪರ ಕಾಳಜಿ ವಹಿಸುತ್ತಾರೆ, ನುಡಿದಂತೆ ನಡೆದಿದ್ದಾರೆ ಮುಂದಿನ ಐದು ವರ್ಷಗಳ ಆಡಳಿತ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಂಡರು.
ಸಂಸದ ವೀರಪ್ಪಮೊಯ್ಲಿ ರಾಹುಲ್ ಗಾಂದಿಯವರನ್ನು ಸ್ವಾಗತಿಸುತ್ತಾ ಕೇಂದ್ರ ಸರ್ಕಾರ ವನ್ನು ಟೀಕಿಸಿದರು, ಪ್ರಧಾನಿ ಮೋದಿ ಬರೀ ಭಾಷಣ ಮಾಡುತ್ತಾರೆ, ಎಲ್ಲೇ ಹೋಗಿ ಭಾಷಣ ಮಾಡಿದರೂ ನಾಲ್ಕೈದು ಸ್ಥಾನಗಳನ್ನು ಕಳೆದು ಕೊಳ್ಳುತ್ತಾರೆ ಎಂದು ಹೇಳಿದರು. ಇವರ ಜೊತೆಯಲ್ಲಿ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಬಿ.ಕೆ. ಹರಿಪ್ರಸಾದ್, ಮಾರ್ಗರೇಟ್ ಆಳ್ವ, ನಗರ ಬ್ಲಾಕ್ ಅಧ್ಯಕ್ಷ ಅಶೋಕ್, ಕೆಪಿಸಿಸಿ ಸದಸ್ಯ ಶ್ರೀನಿವಾಸ ಮತ್ತು ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.
Comments