ಕಾಂಗ್ರೇಶ್ ಪಕ್ಷ ಮಾತ್ರ ಅಲ್ಪಸಂಖ್ಯಾತರ ಪರವಾಗಿದೆ: ಡಾ. ಜಿ ಪರಮೇಶ್ವರ್

07 May 2018 8:29 PM |
582 Report

ಕೊರಟಗೆರೆ ಮೇ. :- ಅಲ್ಪ ಸಂಖ್ಯಾತರ, ದಲಿತರ ಮತ್ತು ಅಸಹಾಯಕ ಪರ ಇರುವಂತಹ ಏಕೈಕ ಸರ್ಕಾರ ಎಂದರೆ ಕಾಂಗ್ರೇಸ್ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಿಳಿಸಿದರು.        ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಓಬಳಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿನ ಗೇರಹಳ್ಳಿ ಗ್ರಾಮದಲ್ಲಿನ ಮುಸ್ಲಿಂ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

       ಕಾಂಗ್ರೇಸ್ ಸರ್ಕಾರ ಅಲ್ಪಸಂಖ್ಯಾತರಿಗಾಗಿಯೇ ವಿಶೇಷ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಸಮುದಾಯ ಮುಖ್ಯವಾಹಿನಿಗೆ ಬರಲು ಬೇಕಾಗುವಂತಹ ಎಲ್ಲಾ ಸೌವಲತ್ತುಗಳನ್ನು ನೀಡಿದ್ದು ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚಿಸಿದರು.

        ಇಡೀ ದೇಶದಲ್ಲ ಅಂದಿನಿಂದ ಅಲ್ಪಸಂಖ್ಯಾತರ ರಕ್ಷಣಿಯನ್ನು ಮಾಡಿ ಕೋಮವಾದಿಗಳಿಂದ ರಕ್ಷಣೆಯನ್ನು ನೀಡಿದ್ದು ಇದನ್ನು ಯಾರೂ ಮರೆಯಬಾರದು ಕಾಂಗ್ರೇಸ್ ನ್ನು ಬೆಂಬಲಿಸಬೇಕು ಎಂದರು.

       ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್ ಪಟೇಲ್ ಮಾತನಾಡಿ  ನಿಮ್ಮನ್ನು ನಾವು ರಕ್ಷಣೆ ಮಾಡುತ್ತೇವೆ… ನಮ್ಮ ಪಕ್ಷಕ್ಕೆ ಮತಹಾಕಿ.. ನಿಮಗೆ ಏನೆಲ್ಲಾ ಬೇಕು ಅದೆಲ್ಲವನ್ನೂ ನೀಡುತ್ತೇವೆ ಎಂದು ಆಮಿಷ ತೋರುತ್ತಾರೆ ಯಾವುದಕ್ಕೂ ಕಿವಿಕೊಡದೇ ಉತ್ತಮ ವಿದ್ಯಾವಂತ ಸುಸಂಸ್ಕೃತ ವ್ಯಕ್ತಿ ಪರಮೇಶ್ವರ್ ಗೆ  ಮತ ಹಾಕುವಂತೆ ಮನವಿ ಮಾಡಿದರು.

       ಈ ಸಂದರ್ಭದಲ್ಲಿ ಮುತ್ತವಲ್ಲಿ  ಅಬ್ದುಲ್ ರಾಜಾಕ್,  ಮುಖಂಡರಾರ ಅರಕೆರೆ ಸೋಮಶೇಖರ್, ಸೈಪುಲ್ಲಾ, ಕಲೀಂ, ವಾಜೀದ್ ಸೇರಿದಂತೆ ಇತರೆ ಸಮುದಾಯದ ಮುಖಂಡರು ಇದ್ದರು. ( ಚಿತ್ರ ಇದೆ)

 

Edited By

Raghavendra D.M

Reported By

Raghavendra D.M

Comments