ಪರಂ ಪರ ಮಾದಿಗ ಸಮುದಾಯವಿರಬೇಕು… ಪರಂ ಸದಾಶಿವ ಆಯೋಗದ ವಿರೋಧಿಯಲ್ಲ : ಬಿಕ್ಕೇಗುಟ್ಟೆ ವೆಂಕಟೇಶ್

ಕೊರಟಗೆರೆ ಮೇ. :- ಮಾದಿಗ ಸಮುದಾಯ ಯಾರೊಬ್ಬರ ಮಾತಿಗೂ ಕಿಡಿಕೊಡಬೇಡಿ… ಸದಾಶಿವ ಆಯೋಗ ಅನುಷ್ಠಾಗೊಳ್ಳಲಿದೆ ಇದಕ್ಕೆ ಕಾಂಗ್ರೇಸ್ ಸರ್ಕಾರದ ಆಯ್ಕೆ ಅರದಲ್ಲೂ ಪರಮೇಶ್ವರ್ ಆಯ್ಕೆ ಮುಖ್ಯ ಎಂದು ದಲಿತ ಮುಖಂಡರೂ ಆದ ಉದ್ಯಮಿ ಬಿಕ್ಕೇಗುಟ್ಟೆ ವೆಂಕಟೇಶ್ ತಿಳಿಸಿದರು.
ತಾಲೂಕಿನ ಹೋಳವನಹಳ್ಳಿಯಲ್ಲಿ ಸೋಮವಾರ ದಲಿತ ಕೇರಿಗಳಿಗೆ ಭೇಟಿ ದಲಿತ ಎಡಗೈ ಸಮುದಾಯದ ಮುಖಂಡರೊಂದಿಗೆ ಸಮಾಲೋಚಿಸಿ ಯಾವುದೇ ತಪ್ಪು ನಿರ್ಧಾರಗಳನ್ನು ಮಾಡದಂತೆ ಸೂಚಿಸಿದರು.
ಸದಾಶಿವ ಆಯೋಗದ ರಚನೆಯಾದಾಗ ಪರಮೇಶ್ವರ್ ಮಂತ್ರಿಗಳಾಗಿದ್ದಾರು, ಅದಲ್ಲದೇ ಆಯೋಗದ ಸದಸ್ಯರಾಗಿ ಇದನ್ನು ರಚನೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪರವಾಗಿದ್ದ ವ್ಯಕ್ತಿಗೆ ಕ್ಷೇತ್ರದಲ್ಲಿ ಪರಂ ವಿರುದ್ದ ಹೇಳಿಕೆ ನೀಡಿ ಅವರಿಗೆ ಮಾದಿಗ ಸಮುದಾಯದ ಮತಗಳನ್ನು ಹಾಕದಂತೆ ಕೆಲವು ಕುತಂತ್ರಿಗಳು ಹುನ್ನಾರ ನಡೆಸುತ್ತಿದ್ದು ಇದಕ್ಕೆ ಯಾರೊಬ್ಬರೂ ತಲೆಕೆಡಿಸಿಕೊಳ್ಳಬೇಡಿ ಎಂದರು.
ಈ ಸಂದರ್ಭದಲ್ಲಿ ಲಿಡ್ಕರ್ ನಿರ್ದೇಶಕ ನರಸಿಂಹಮೂರ್ತಿ, ಎಪಿಎಂಸಿ ಸದಸ್ಯ ಜಯರಾಮಯ್ಯ, ಹೊಳವನಹಳ್ಳಿ ಗ್ರಾ.ಪಂ ಸದಸ್ಯ ರಾಮಕೃಷ್ಣಯ್ಯ, ಶೂದ್ರ ಸೇನೆ ರಾಜ್ಯ ಸಂಚಾಲಕ ದಿಲೀಪ್, ಮುಖಂಡರಾದ ಬ್ಯಾಲ್ಯ ಅಫೀಜ್, ಗೋಪಿನಾಥ್, ಆನಂದ ಸೇರಿದಂತೆ ಇತರರು ಇದ್ದರು.
Comments