'ಕೈ' ಗೆ ಕೈ ಕೊಟ್ಟು 'ಕಮಲ' ವನ್ನು ಕಮರಿಸಿ 'ಹೊರೆ' ಹೊತ್ತ ಪ್ರಭಾವಿ ಮುಖಂಡರು...!!



ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ . ಅಲ್ಲದೆ ಪಕ್ಷಾಂತರ ಪರ್ವ ಹೆಚ್ಚುತ್ತಿದ್ದು ಅನ್ಯ ಪಕ್ಷದ ಮುಖಂಡರು ಜೆಡಿಎಸ್ ನತ್ತ ಮುಖಮಾಡಿದ್ದಾರೆ. ಹನೂರು ಪಟ್ಟಣದಲ್ಲಿ ಜೆಡಿಎಸ್‍ನ ಹಿರಿಯ ಮುಖಂಡರಾದ ರಾಜಶೇಖರ್ ಮೂರ್ತಿ ನೇತೃತ್ವದಲ್ಲಿ ಹಲವು ಪ್ರಭಾವಿ ಮುಖಂಡರು ಮತ್ತು ಯುವಕರು ಜೆಡಿಎಸ್ ಸೇರ್ಪಡೆಯಾದರು.
ನಂತರ ಮಾತನಾಡಿದ ರಾಜೇಶೇಖರ್ ಮೂರ್ತಿ, ಹನೂರು ಕ್ಷೇತ್ರದ ಜನತೆ ಹಲವು ವರ್ಷಗಳ ಕುಟಂಬ ರಾಜಕಾರಣದಿಂದ ಬೇಸತ್ತಿದ್ದು, ಕುಟಂಬ ರಾಜಕಾರಣಕ್ಕೆ ನಾಂದಿ ಹಾಡಿ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಬೇಕು ಎಂಬ ದೃಷ್ಟಿಯಿಂದ ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ. ಹೆಚ್ಚಾಗಿ ಯುವ ಸಮೂಹ ಬದಲಾವಣೆ ಕಡೆ ದಾಪುಗಾವಲು ಇಟ್ಟಿದ್ದಾರೆ. ಇದ್ದರಿಂದ ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಮಂಜುನಾಥ್ ಶಾಸಕ ಆಗುವುದು ನಿಶ್ಚಿತ. ಅದರಂತೆ ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾದ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ನಂಜೇ ಒಡೆಯರ್ ದೊಡ್ಡಿ ಮತ್ತು ಬೈರನ್ನಥ ಗ್ರಾಮದ ಬಿಜೆಪಿ ಮತ್ತು ಕಾಂಗ್ರೆಸ್ ನ ಸುಮಾರು ನಲವತ್ತು ಕಾರ್ಯಕರ್ತರು ಹನೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಹಾಗೂ ಸತ್ತೆಗಾಲ ಗ್ರಾಮ ಪಂಚಾಯತ್ ಕಾಂಗ್ರೆಸ್ ಸದಸ್ಯರಾದ ಸಿದ್ದರಾಜು, ಮಹದೇವ, ರತ್ನವೇಲು, ನಂಜುಂಡಸ್ವಾಮಿ, ಮಪನ್ನಾಡಿ ನಾಯಕ, ಪೆರಿನಾಯಕ ಮುಂತಾದವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಪ್ರಸನ್ನ, ರುದ್ರಾರಾದ್ಯ, ಚಂಗವಾಡಿ ರಾಜು, ಹನೂರು ಬಸವರಾಜು, ಮಹಾಲಿಂಗ, ನಟರಾಜು, ಅಜ್ಜಿಪುರ ಸತೀಶ್, ಅಮೀನ್, ಶಿವಮಲ್ಲು, ಹರೀಶ್ ಮಂಜುನಾಥ್ ಹಾಗು ಹಲವು ಕಾರ್ಯಕರ್ತರು ಹಾಜರಿದ್ದರು.
Comments