ಜೆಡಿಎಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ….ಪಟ್ಟಿಯಲ್ಲಿರುವ ಮುಖ್ಯಾಂಶಗಳು ಹೀಗಿವೆ
2018ರ ವಿಧಾನಸಭಾ ಚುನಾವಣೆ ಸಲುವಾಗಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದೆ. ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಗೆಲ್ಲಲು ಜೆಡಿಎಸ್ 'ಜನತಾಪ್ರಣಾಳಿಕೆ ಜನರದ್ದೆ ಆಳ್ವಿಕೆ' ಎಂಬ ಹೆಸರಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ನಿವೃತ್ತ ಐಎಎಸ್ ಅಧಿಕಾರಿ ಸುಬ್ರಮಣ್ಯ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ನೀಡಿದ ವರದಿ ಅನ್ವಯ ಜೆಡಿಎಸ್ ಪ್ರಣಾಳಿಕೆಯನ್ನು ರಚನೆ ಮಾಡಿದೆ ಎನ್ನಲಾಗಿದೆ.
ಇಂದು ಜೆಡಿಎಸ್ ಮುಖ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ ಕುಮಾರಸ್ವಾಮಿ ಇವತ್ತು ನಮ್ಮ ಪ್ರಣಾಳಿಕೆಯು ಎರಡು ಪಕ್ಷಗಳ ಪ್ರಣಾಳಿಕೆಗಿಂತ ವಿಭ್ನಿವಾಗಿದೆ. ಸಾಮಾಜಿಕ ನ್ಯಾಯ, ಕೈಗಾರಿಕ ಸಮಸ್ಯೆಗಳಿಗೆ ಪರಿಹಾರ. ವಿದ್ಯುತ್ ಚಕ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುವುದರ ಬಗ್ಗೆ ಮಾತನಾಡಿದರು.
ಜೆಡಿಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು ಹೀಗಿವೆ:
- ನೇಕಾರರ ಸಾಲ ಮನ್ನಾ.
- ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೇಟ್ ನಲ್ಲಿ ರಾಜ್ಯದ ರೈತರ ಸಾಲಮನ್ನ.
- ಗರ್ಭಿಣಿ ಹಾಗೂ ಬಾಣಂತಿಯರಿಗೆ ಮೂರು ತಿಂಗಳುಗಳ ಕಾಲ ಆರು ಸಾವಿರ ಭತ್ಯೆ.
- ಇಸ್ರೆಲ್ ಮಾದರಿಯ ಕೃಷಿ ತಂತ್ರಜ್ಞಾನ ಅಳವಡಿಕೆ * ರೈತರ ಸಂಪೂರ್ಣ ಸಾಲಮನ್ನಾ.
- ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ವಿದ್ಯುತ್.
- ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಉಚಿತ.
- ಇಸ್ರೇಲ್ ಮಾದರಿ ಕೃಷಿ ಪದ್ದತಿ ಅಳವಡಿಕೆ.
- ಶ್ರೀ ಶಕ್ತಿ ಸ್ವಸಾಯ ಸಂಘಗಳ ಸಾಲ ಮನ್ನಾ.
- ಗರ್ಭಿಣಿಯರಿಗೆ 6 ತಿಂಗಳಿನಿಂದ 12 ತಿಂಗಳ ತಿಂಗಳ ವರೆಗೂ ಪ್ರತಿ ತಿಂಗಳು 6000 ರೂ ಧನಸಹಾಯ.
- ವಿಕಲಚೇತನರಿಗೆ ತಿಂಗಳಿಗೆ 2000 ಸಹಾಯಧನ.
- 70 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮಾಸಿಕ 5000 ರೂ.
- ಪ್ರತಿ ತಿಂಗಳು ವಿಧಾನಸೌಧದದಲ್ಲಿ ರೈತರ ಸಭೆ.
- ವಿಧವವೇತನ ಮಾಸಿಕ 2000 ರೂ.
- ವಿಕಲಚೇತರನ್ನು ಮದುವೆ ಯಾದರೆ 50 ಸಾವಿರದಿಂದ 1 ಲಕ್ಷದವರೆಗೆ ಸಹಾಯಧನ.
- ಹಳ್ಳಿಗಳ ಅವಿದ್ಯಾವಂತ ಯುವಕ, ಯುವತಿಯರಿಗೆ ಸಸಿ ನಡೆವ ಕೆಲಸ ನೀಡಿ ಮಾಸಿಕ 5000 ರೂ ಗೌರವಧನ.
- ವಯೋವೃದ್ಧರಿಗೆ ಉಚಿತ ಬಸ್ ಪಾಸ್. *ಬಿಪಿಎಲ್ ಕಾರ್ಡ್ ದಾರರಿ ಗೆ 30 ಕೆಜಿ ಅಕ್ಕಿ. *ರೈತರ ಬೆಳೆಗೆ ಬೆಂಬಲ ಬೆಲೆ.
- ಸಣ್ಣ ಟ್ರಾಕ್ಟರ್ ಖರೀದಿಗೆ ಶೇ75 ರಷ್ಟು ಹಾಗೂ ಇತರೆ ಸಲಕರಣೆ ಖರೀದಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು.
- ಬಡ ಮಹಿಳೆಯರಿಗೆ ಕುಟುಂಬ ನಿರ್ವಹಣೆಗೆ ಮಾಸಿಕ 2000 ರೂ.
- ಆರ್ಯವೈಶ್ಯ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ.
- ಉದ್ಯೋಗವಂತ ಮಹಿಳೆಯರಿಗೆ ಬೆಂಗಳೂರಿನಲ್ಲಿ ಸು.100 ವಸತಿ ನಿಲಯಗಳ ಸ್ಥಾಪನೆ.
- ಡಾ. ವಿಷ್ಣುವರ್ಧನ್ ಸಮಾಧಿ ಸ್ಥಳದ ವಿವಾದ ಬಗೆಹರಿಸಲಾಗುವುದು.
- ಆಶಾ ಕಾರ್ಯಕರ್ತರ ಪ್ರೋತ್ಸಾಹ ಧನ 3500 ರಿಂದ 5000 ರೂಗೆ ಏರಿಕೆ.
- ವಕೀಲರ ಸಂಘಕ್ಕೆ 100 ಕೋಟಿ ಅನುದಾನ. ಮತ್ತು ವಕೀಲರಿಗೆ 5000 ಸ್ಟೇಪೆಂಡ್.
- ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದುವರಿಕೆ.
- ಅಂಗಾಂಗ ಕಸಿ ಮಾಡಿಸುವುದಕ್ಕೆ ಎಲ್ಲಾ ರೀತಿಯ ಖರ್ಚು ವೆಚ್ಚಗಳನ್ನು ಸರ್ಕಾರವೇ ಎಲ್ಲಾ ರೀತಿಯ ಹಣ ನೀಡುವುದು.
- ಸರ್ಕಾರಿ ಆಸ್ಪತ್ರೆ ವೈದ್ಯರ ವಯೋಮಿತಿಯನ್ನು 62 ವರ್ಷಕ್ಕೆ ಏರಿಸುವುದು.
- ರೈತರ ಮಕ್ಕಳಿಗೆ ಸ್ನಾತಕೋತ್ತರ, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜ್ ಶಿಕ್ಷಣ ಶುಲ್ಕವನ್ನು ನೀಡುವುದು.
- ಮುಸ್ಲಿಂರಿಗೆ ಪ್ರತ್ಯೇಕ ವಿವಿ.
- ಸಾಚಾರ್ ವರದಿ ಅನುಷ್ಠನಕ್ಕೆ ಒತ್ತು.
Comments