ಜಯಮಾಲ, ಅಭಿನಯ ಜೊತೆಯಲ್ಲಿ ವೆಂಕಟರಮಣಯ್ಯ ನವರಿಂದ ಭರ್ಜರಿ ಪ್ರಚಾರ,
ಇಂದು ದೊಡ್ಡಬಳ್ಳಾಪುರ ನಗರದ ವಿವಿಧ ಕಡೆಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಮತ ನೀಡುವಂತೆ ನಾಗರೀಕರಲ್ಲಿ ವಿನಂತಿಸಿಕೊಂಡರು, ಪ್ರಚಾರ ನಡೆಸುವ ಸಲುವಾಗಿ ಚಿತ್ರನಟಿಯರಾದ ಶ್ರೀಮತಿ ಜಯಮಾಲ ಮತ್ತು ಅಭಿನಯಾ ಆಗಮಿಸಿದ್ದರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಕೆಲಸಗಳನ್ನು ವಿವರಿಸಿದರು, ದೊಡ್ಡಬಳ್ಳಾಪುರದ ಅಭಿವೃದ್ಧಿಗೆ ವೆಂಕಟರಮಣಯ್ಯನವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿ ಮತ್ತೊಂಮ್ಮೆ ಅವರನ್ನು ಆಯ್ಕೆ ಮಾಡುವಂತೆ ವಿನಂತಿಸಿದರು. ಕೆಪಿಸಿಸಿ ಸದಸ್ಯ ಶ್ರೀನಿವಾಸ್, ಉಪಾಧ್ಯಕ್ಷೆ ಜಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ನಟರಾಜ್, ನಗರ ಬ್ಲಾಕ್ ಅಧ್ಯಕ್ಷ ಅಶೋಕ್, ಓಬಿಸಿ ಉಪಾಧ್ಯಕ್ಷ ಜಾನು ಮತ್ತಿತರರು ಜೊತೆಯಲ್ಲಿದ್ದರು.
Comments