ಬಿಜೆಪಿ ಅಭ್ಯರ್ಥಿ ನರಸಿಂಹಸ್ವಾಮಿಯವರಿಂದ ನಗರದಲ್ಲಿ ಮತಯಾಚನೆ







ಇಂದು ನರಸಿಂಹಸ್ವಾಮಿಯವರು ದೊಡ್ಡಬಳ್ಳಾಪುರ ನಗರದ ವಿವಿಧ ವಾರ್ಡ್ ಗಳಲ್ಲಿ ಭರ್ಜರಿ ಪ್ರಚಾರ ನಡೆಸಿ ಮತ ನೀಡುವಂತೆ ನಾಗರೀಕರಲ್ಲಿ ವಿನಂತಿಸಿಕೊಂಡರು. ಬೆಳಿಗ್ಗೆ 9ಕ್ಕೆ ಟ್ಯಾಂಕ್ ರಸ್ತೆಯಲ್ಲಿರುವ ಜಗನ್ನಾಥ್ ರವರ ಮನೆಯಿಂದ ಹೊರಟು ಕಲಾಸಿಪಾಳ್ಯ, ವೀರಭದ್ರಪ್ಪನಪೇಟೆ, ತೂಬಗೆರೆಪೇಟೆ, ಕಾಸ್ ಭಾಗ್, ಮುತ್ತೂರು, ಸಿದ್ದನಾಯಕನಹಳ್ಳಿ ಯಲ್ಲಿ ಪ್ರಚಾರ ನಡೆಸಿದರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಹಾಗೇ ರಾಜ್ಯದಲ್ಲೂ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಲು ಕೋರಿದರು. ಇದೇ ಸಂದರ್ಭದಲ್ಲಿ ಟ್ಯಾಂಕ್ ರಸ್ತೆಯಲ್ಲಿರುವ ಹಲವಾರು ಮುಸ್ಲಿಂ ಮತಬಾಂಧವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು, ಮುಸ್ಲಿಂ ಮಹಿಳೆಯರು ಮಾತನಾಡಿ ಕೇಂದ್ರದ ಮೋದಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ನಮ್ಮ ಮಕ್ಕಳು ಮತ್ತು ಸೊಸೆಯಂದಿರು ಮೋದಿಯವರ ಅಭಿಮಾನಿಗಳು, ಅವರಿಂದ ಪ್ರೇರಣೆಗೊಂಡು ನಾವುಗಳು ಭಾರತೀಯ ಜನತಾ ಪಕ್ಷ ಸೇರುತ್ತಿದ್ದೇವೆ ಎಂದು ಹೇಳಿದರು. ನಗರದ ಮಾಜಿ ಅಧ್ಯಕ್ಷ ಮುದ್ದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಗಾಳಿಪಟ ಪ್ರಕಾಶ್, ನಗರ ಬಿಜೆಪಿ ಅಧ್ಯಕ್ಷ ರಂಗರಾಜು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ, ಕಮಲಾ, ಗಿರಿಜ, ದಾಕ್ಷಾಯಣಿ, ಕವಿತ ಮತ್ತಿತರ ಮುಖಂಡರು ಜೊತೆಯಲ್ಲಿದ್ದರು.
Comments