ಜೆಡಿಎಸ್ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ಮಾಡಿದ ಈ ಸ್ಟಾರ್ ನಟ..!!
ರಾಜ್ಯ ರಾಜಕೀಯದ ಅಖಾಡ ರಂಗೇರುತ್ತಿದೆ. ಅಲ್ಲದೆ ಜೆಡಿಎಸ್ ಅಭ್ಯರ್ಥಿಗಳ ಪರ ಹಲವು ನಟ-ನಟಿಯರು ಪ್ರಚಾರ ಮಾಡುತ್ತಿದ್ದಾರೆ. ನಟ ರಾಕಿಂಗ್ ಸ್ಟಾರ್ ಯಶ್ ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್ ಅಭ್ಯರ್ಥಿ ಗೌರಿ ಶಂಕರ್ ಪರ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ ಮಾಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಯಶ್, ತಾನು ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನಗೆ ಅಭ್ಯರ್ಥಿ ಮಾತ್ರ ಮುಖ್ಯ, ನನ್ನದು ಪಕ್ಷಾತೀತ ಪ್ರಚಾರ ಎಂದು ಹೇಳಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೌರಿ ಶಂಕರ್ ಮಾತನಾಡಿ, ಯಶ್ ನನ್ನ ಸ್ನೇಹಿತ, ಹಾಗಾಗಿ ನನ್ನ ಕ್ಷೇತ್ರದಲ್ಲಿ ಮತಯಾಚನೆ ಮಾಡಿದ್ದಾರೆ. ನೆರೆದಿದ್ದ ಸಾವಿರಾರು ಯುವಕರ ಉತ್ಸಾಹ ಕಂಡು ಖುಷಿಯಾಯಿತು. ಇದು ನನ್ನ ಗೆಲುವಿಗೆ ನಾಂದಿ ಎಂದು ಸಂತಸ ವ್ಯಕ್ತಪಡಿಸಿದರು.
Comments