ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನವೇ ಸಿ.ಪಿ.ಯೋಗೇಶ್ವರ್ ಗೆ ಭಾರಿ ಹಿನ್ನಡೆ...!!

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರದ ರಾಜಕೀಯ ರಂಗೇರುತ್ತಿದೆ. ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡು, ತಮ್ಮ ಗ್ರಾಮಕ್ಕೆ ಪ್ರಚಾರಕ್ಕೆ ಬರದಂತೆ ತಡೆದಿರುವ ಘಟನೆ ಚನ್ನಪಟ್ಟಣ ತಾಲೂಕಿನ ಸಾಮಂದಿಪುರ ಗ್ರಾಮದಲ್ಲಿ ನಡೆದಿದೆ ನಮ್ಮ ಗ್ರಾಮದಲ್ಲಿ ನೀವು ಏನು ಅಭಿವೃದ್ಧಿ ಮಾಡಿಲ್ಲ. ಹಾಗಾಗಿ ನೀವು ನಮ್ಮ ಗ್ರಾಮಕ್ಕೆ ಬರಕೂಡದು ಎಂದು ಗ್ರಾಮಸ್ಥರು ತಡೆದಿದ್ದಾರೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಚನ್ನಪಟ್ಟಣದ ಮುಸ್ಲಿಂ ಬಡಾವಣೆಗಳಲ್ಲಿ ಬಿಜೆಪಿ ಶಾಸಕರಿಗೆ ಮತ್ತು ಕಾರ್ಯಕರ್ತರಿಗೆ ಪ್ರವೇಶವಿಲ್ಲ ಎನ್ನುವ ಬಿತ್ತಿಪತ್ರ ಅಂಟಿಸಿ ಸ್ಥಳೀಯರಿಂದ ಪ್ರತಿಭಟನೆ ನಡೆಸಲಾಗಿತ್ತು. ಯೋಗೇಶ್ವರ್ ಬರದಂತೆ ತಡೆ ಮಾಡಿ, ನೂರಾರು ಮಂದಿ ಗ್ರಾಮಸ್ಥರು ಸಿಪಿವೈಗೆ ದಿಗ್ಬಂಧನ ವಿಧಿಸಿದ್ದಾರೆ. ಆಗ ಗ್ರಾಮಸ್ಥರ ವರ್ತನೆಯಿಂದ ತಬ್ಬಿಬ್ಬಾದ ಸಿ.ಪಿ.ಯೋಗೇಶ್ವರ್ ಗ್ರಾಮಸ್ಥರಿಗೆ ಅವಾಜ್ ಹಾಕಿ, ನಿಮ್ಮ ಉದ್ದೇಶ ಏನು ಎಂದು ಕೈ ತೋರಿಸಿ, ಗ್ರಾಮಸ್ಥರನ್ನೆ ಗದರಿಸಿ ಸುಮ್ಮನಿರಿಸಲು ಮುಂದಾಗಿದ್ದಾರೆ. ಇದರಿಂದ ಸಿಟ್ಟಾದ ಜನರು ಪ್ರಶ್ನೆಗಳ ಸೂರಿ ಮಳೆ ಸುರಿಸಿದ್ದಾರೆ. ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸದೆ ಯೋಗೇಶ್ವರ್ ಗ್ರಾಮದಿಂದ ಹೊರ ನಡೆದಿದ್ದಾರೆ. ಸಿ.ಪಿ.ಯೋಗೇಶ್ವರ್ ತಮಗೆ ಸರಿಯಾಗಿ ಸ್ಪಂದಿಸದೆ, ಬೇಜವಾಬ್ದಾರಿ ನಡೆದುಕೊಂಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದರು. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿರುವ ಜೆಡಿಎಸ್, ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ.ಯೋಗೇಶ್ವರ್ ಗೆ ಮಣ್ಣು ಮುಕ್ಕಿಸಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಯವರು ಮುಂದಾಗಿದ್ದು, ಸರಳ ಬಹುಮತದೊಂದಿಗೆ ಕ್ಷೇತ್ರವನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments