ಕೊರಟಗೆರೆ ಕ್ಷೇತ್ರ ಅಭಿವೃದ್ಧಿಗೆ ಪರಂ ರಂತ ರಾಜಕಾರಣಿ ಬೇಕು: ಅನಿಲ್ ಕುಮಾರ್ ಪಾಟೀಲ್

04 May 2018 8:29 PM |
652 Report

ಕೊರಟಗೆರೆ ಮೇ. 3:- ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗೆ ಪರಂ ರಂತ ರಾಜಕಾರಣಿ ಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಯೂ ಆದ ಕೊರಟಗೆರೆ ವಿಧಾನ ಸಭಾ ಉಸ್ತುವಾರಿ ಅನಿಲ್ ಕುಮಾರ್ ಪಾಟೀಲ್ ತಿಳಿಸಿದರು.        ಕೋರಾ ಹೋಬಳಿಯ ಕೆಸ್ತೂರು ಗ್ರಾ.ಪಂ  ವ್ಯಾಪ್ತಿಯಲ್ಲಿ  ಮುಖಂಡರ ಸಭೆ ಮತ್ತು ರೋಡ್ ಶೋ ನಡೆಸಿ ಮಾತನಾಡಿದರು.

 

       ರಾಜ್ಯದಲ್ಲಿ ಈ ಬಾರಿ ಕಾಂಗ್ರೇಸ್   ಸ್ಪಷ್ಟ ಬಹುತದೊಂದಿಗೆ ಅಧಿಕಾರ ಪಡೆಯಲಿದೆ  ಕಳೆದ ಬಾರಿ ಕೊರಟಗೆರೆ ಜನತೆ ಪರಮೇಶ್ವರ್ ಸೋಲಿಗೆ ಕಾರಣರಾಗಿದ್ದೀರಿ… ಅದರ ಅರಿವೂ ಸಹ ನಿಮಗೀಗ ಆಗಿದೆ ಈ ಬಾರಿ ಅಂತಹ ತಪ್ಪನ್ನು ಮರುಕಳಿಸದಂತೆ ನೋಡಿಕೊಳ್ಳಿ ಯಾವುದೇ ವಿರೋಧಿಗಳು ಹೇಳುವಂತಹ ಮಾತಿಗೆ ಕಿವಿಕೊಡಬೇಡಿ…  ಎಂತಹದ್ದೇ ಸಂದರ್ಭ ಬಂದರೂ ಮನಸ್ಸನ್ನು ಬದಲಾಯಿಸದೇ ಒಕ್ಕೊರಲಿನಿಂದ ಕಾಂಗ್ರೇಸ್ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

       ಎಲ್ಲಾ ಸಮುದಾಯದವರನ್ನೂ ಒಗ್ಗೂಡಿಸಿಕೊಂಡು… ಎಲ್ಲರಿಗೂ ಸಮಾನ ಪ್ರಾತಿನಿತ್ಯವನ್ನು ಕೊಟ್ಟು ಸರ್ವರಿಗೂ ಸಮಪಾಲು.. ಸರ್ವರಿಗೂ ಸಮಬಾಳು ಎನ್ನುವ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.

       ಗೌರಗಾನಹಳ್ಳಿ, ಗೊಲ್ಲರಹಳ್ಳಿ, ಶಂಭೋನಹಳ್ಳಿ, ಭಕ್ಕಸಂದ್ರ, ಕೆಂಪನದೊಡ್ಡಹಳ್ಳಿ ಸೇದಂತೆ ಇತರೆ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.

       ತುಮಕೂರು ಎಪಿಸಿ ಅಧ್ಯಕ್ಷ ಗಂಗಾಧರಯ್ಯ,  ಗ್ರಾ.ಪಂ ಕೆಸ್ತೂರು ಅಧ್ಯಕ್ಷ ಮಂಜುನಾಥ್, ಕೋರಾ ಗ್ರಾ.ಪಂ ಅಧ್ಯಕ್ಷ ನಜೀರ್,ಯದುನಂದನ್  ಮುಖಂಡರಾದ ತಾಲೂಕು ಎಸ್ ಸಿ ಘಟಕದ ಅಧ್ಯಕ್ಷ ರಾಜು, ತಾಲೂಕು ಮಹಿಳಾ ಅಧ್ಯಕ್ಷ ಶೈಲಜಾ ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)

 

Edited By

Raghavendra D.M

Reported By

Raghavendra D.M

Comments