ಸ್ಥಳೀಯ ಮುಖಂಡರಿಂದ ಮಹದೇವಪ್ಪ ಅಪ್ತನಿಗೆ ಕೊರಟಗೆರೆಯಿಂದ ಗೆರಾವ್
ಕೊರಟಗೆರೆ ಮೇ. :- ಕಳೆದ ಬಾರಿ ಪರಂ ಸೋಲಿಗೆ ಕಾರಣವಾಗಿದ್ದ ಹೊರಗಿನವರು(ಸ್ಥಳೀಯರಲ್ಲದವರು) ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಮುಖಂಡರು ಹದ್ದಿನ ಕಣ್ಣನಿಟ್ಟು ಕಾಯುತ್ತಿದ್ದು ಅದೇ ರೀತಿ ಗುರುವಾರ ಕಾಂಗ್ರೇಸ್ ಪಕ್ಷದ ಟಿಕೆಟ್ ಆಕಾಂಕ್ಷಿಯೂ ಆದ ಸಚಿವ ಮಹದೇವಪ್ಪರ ಆಪ್ತನಿಗೆ ರಾಜ್ಯ ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ವೆಂಕಟಾಲಚಯ್ಯ ಸೇರಿದಂತೆ ಇತರೆ ಸ್ಥಳೀಯರು ತರಾಟೆಗೆ ತೆಗೆದುಕೊಂಡರು.
ಸಚಿವ ಮಹದೇವಪ್ಪ ಆಪ್ತ ಕುಮಾರ್ ಮತದಾರರಿಗೆ ಹಣದ ಆಮಿಷವನ್ನು ತೋರಿಸಿ ಪರಂಗೆ ಈ ಬಾರಿ ಮತ ಹಾಕಬೇಡಿ… ಎಂದು ಆ್ಯಂಟಿ ಕ್ಯಾಪೇನ್ ಮಾಡುತ್ತಿದ್ದಾನೆ ಎಂದು ಸ್ಥಳೀಯ ಕಾಂಗ್ರೇಸ್ ಕಾರ್ಯಕರ್ತರು ಕುಮಾರ್ ಮೇಲೆ ಮುಗಿಬಿದ್ದು ಕೈ ಕೈ ಮೀಲಾಯಿಸುವ ಅಂತಕ್ಕೆ ತಲುಪಿತ್ತು.
ತೆಂಗು ನಾರು ಅಭಿವೃದ್ಧಿ ನಿಮಗದ ಅಧ್ಯಕ್ಷ ವೆಂಕಟಾಲಚಯ್ಯ ಕುಮಾರ್ ಗೆ ನೀವು ಯಾರನ್ನ ಕೇಳಿ ಕ್ಷೇತ್ರದ ಒಳಗೆ ಕಾಲಿಟ್ಟಿದ್ದೀರಾ…? ಪರಮೇಶ್ವರ್ ನಿಮಗೆ ಪ್ರಚಾರ ಮಾಡಿ ಅಂತ ಹೇಳಿದ್ದಾರಾ? ಕಳೆದ ಭಾರಿ ಎಲ್ಲರೂ ಬಂದು ಏನು ಮಾಡಿದ್ರಿ ಅನ್ನೋದು ಗೊತ್ತು
ಪರಮೇಶ್ವರ್ ಸೋಲಿಗೆ ಏನು ಕಾರಣ ಅನ್ನೋದು ಗೊತ್ತು ಅವರು ಹೇಳದ ಹೊರತು ಯಾರಿಗೂ ಇಲ್ಲಿ ಪ್ರವೇಶವಿಲ್ಲ ? ನಿಮ್ಮನ್ನ ಪ್ರಚಾರಕ್ಕೆ ಬರ್ರಿ ಅಂತ ಅವರು ಕೇಳಿದ್ರಾ?
ನೀವು ಯಾಕೆ ಇಲ್ಲಿಗೆ ಬಂದಿದ್ದು ಮಹದೇವಪ್ಪ ಆಪ್ತನಿಗೆ ಕೈ ಮುಖಂಡರು ಕ್ಲಾಸ್ ಪಟ್ಟಣದ ಊರ್ಡಿಗೆರೆ ಕ್ರಾಸ್ ಬಳಿ ಮುಗಿಬಿದ್ದರು.
ಮತದಾರರ ಬಳಿ ನಾನು ಕುರುಬ… ನಾನು ಪರಂ ಸೋಲಿಸಲು ಬಂದಿದ್ದೇನೆ ಸಿ.ಎಂ ಹಣ ಕಳೂಹಿಸಿದ್ದಾರೆ ಎಂದು ಕುಮಾರ್ ಹೇಳಿ ಹಣ ನೀಡುತ್ತಿದ್ದು ಗೊತ್ತಿದೆ ಎಂದು ಸ್ಥಳೀಯ ಕಾಂಗ್ರೇಸ್ ಮುಖಂಡರು ಹರಿಹಾಯ್ದರು.
ಮುಖಂಡರ ಮಾತಿಗೆ ಬೆಚ್ಚಿ ಬಿದ್ದ ಕುಮಾರ್ ನಾನು ಸಹ ಚಲವಾದಿ ಮಹಾಸಭಾ ಅಧ್ಯಕ್ಷ ನಾನು ಪರಂ ಪರವಾಗಿ ಬಂದಿದ್ದೇನೆ ನನ್ನದು ಸಕಲೇಶ ಪುರ ಎಂದು ಮುಖಂಡರಿಗೆ ತಿಳಿ ಹೇಳಿದರು ನೀನು ಯಾರಾದ್ರೆ ನಮಗೇನು? ನೀವು ಯಾರು ಅನ್ನೋದೇ ಗೊತ್ತಿಲ್ಲ ? ಪರಮೇಶ್ವರ್ ಹೇಳಿದ್ರು ಅಂತ ಸುಳ್ಳು ಬೇರೆ ಹೇಳ್ತೀರಾ?
ಹೊರಗಿನಿಂದ ಬಂದು ಅವರನ್ನ ಸೋಲಿಸೋಕೆ ನೋಡ್ತೀರಾ? ಈ ಸಾರಿ ಅದಕ್ಕೆಲ್ಲ ಅವಕಾಶ ನೀಡಲ್ಲ ಅಂತ ತಾಲೂಕು ಯುವ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿನಯ್ ಕುಮಾರ್ ತರಾಟೆಗೆ ತೆಗೆದುಕೊಂಡರು.
ಒಟ್ಟಾರೆ ಸಚಿವ ಮಹದೇವಪ್ಪ ಆಪ್ತನಿಗೆ ಚಳಿ ಬಿಡಿಸಿದ ಕೈ ಕಾರ್ಯಕರ್ತರು ಕೊರಟಗೆರೆಯಲ್ಲಿ ಸಿಕ್ರೇಟ್ ಆಪರೇಷನ್ ಮಾಡ್ತಿದ್ಯಾ ಸಿಎಂ ತಂಡ ಎನ್ನುವ ಅನುಮಾನಕ್ಕೆ ಪುಷ್ಟಿ ನೀಡಿದಂತಿತ್ತು !.
Comments