ಜೆಡಿಎಸ್ ಪರ ಪ್ರಚಾರ ಮಾಡಲಿರುವ ಈ ಇಬ್ಬರು ಸ್ಟಾರ್ ನಟರು...!!
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಅಖಾಡ ರಂಗೇರುತ್ತಿದೆ. ಹಲವು ಸ್ಟಾರ್ ನಟ-ನಟಿಯರು ಜೆಡಿಎಸ್ ಪರ ಪ್ರಚಾರಕ್ಕಿಳಿದಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತಾರಾ ಪ್ರಚಾರಕರನ್ನು ಬಳಸಿಕೊಳ್ಳಲು ಮುಂದಾಗಿರುವ ಜೆಡಿಎಸ್ ದಕ್ಷಿಣ ಭಾರತದ ಪ್ರಖ್ಯಾತ ನಟ-ನಟಿಯರನ್ನು ಪ್ರಚಾರಕ್ಕಾಗಿ ಕರೆತರುತ್ತಿದೆ.
ದಕ್ಷಿಣ ಭಾರತದ ನಟ ಪವರ್ ಸ್ಟಾರ್ ಪವನ್‍ಕಲ್ಯಾಣ್, ಕನ್ನಡ ಚಿತ್ರರಂಗದ ಕಿಚ್ಚ ಸುದೀಪ್, ಪೂಜಾಗಾಂಧಿ, ಅಮೂಲ್ಯ, ಡಾ.ಸೂರಜ್ ರೇವಣ್ಣ ಅವರನ್ನು ಪ್ರಚಾರಕ್ಕೆ ಕರೆತರಲು ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗಿದೆ. ಈಗಾಗಲೇ ಜೆಡಿಎಸ್‍ನೊಂದಿಗೆ ಮೈತ್ರಿಮಾಡಿಕೊಂಡಿರುವ ಬಿಎಸ್‍ಪಿಯ ಮಾಯಾವತಿ, ಅಸಾದುದ್ದೀನ್ ಓವೈಸಿ ಪ್ರಚಾರಕ್ಕೆ ಬರುತ್ತಿದ್ದು, ಇದರೊಂದಿಗೆ ಸ್ಟಾರ್ ನಟ-ನಟಿಯರು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
Comments