ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನಮತ, ಮತ್ತೊಂದು ಪ್ರಭಾವಿ ವಿಕೆಟ್ ಜೆಡಿಎಸ್ ತೆಕ್ಕೆಗೆ..!!



ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಕಣ ರಂಗೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ, ಜಿ.ಟಿ.ದೇವೇಗೌಡ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಈ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವ ಸಂದರ್ಭದಲ್ಲೇ ಪಕ್ಷಾಂತರ ಪರ್ವ ಸಹ ನಡೆಯುತ್ತಿದೆ.
ನೂರಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ಸಿಗರು ಜೆಡಿಎಸ್ ಸೇರಿದ್ದಾರೆ. ಸಾಹುಕಾರ ಹುಂಡಿ, ಗ್ರಾಮ ಪಂಚಾಯಿತಿ ಸದಸ್ಯ ಡಿ. ಶ್ರೀರಾಮ್, ಪುಟ್ಟಸ್ವಾಮಿ, ಹರೀಶ್, ಪ್ರಮೋದ್ ದಾಸನಕೊಪ್ಪಲಿನ ಹಲವಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಸೇರ್ಪಡೆಗೊಂಡರು. ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಸಾಹುಕಾರ ಹುಂಡಿಯ ಕಾಂಗ್ರೆಸ್‍ನ ಶ್ರೀರಾಮ್ ಮಾತನಾಡಿ, ನಮ್ಮ ತಂದೆ 40 ವರ್ಷಗಳಿಂದ ಕಾಂಗ್ರೆಸ್‍ನಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಒಂದು ಸ್ಥಾನಮಾನ ನೀಡಿಲ್ಲ. ನಾನು ಸಹ ಹಲವು ವರ್ಷಗಳಿಂದ ಕಾಂಗ್ರೆಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನನ್ನೂ ಸಹ ಪಕ್ಷ ಗುರುತಿಸಿಲ್ಲ. ಇದರಿಂದ ಬೇಸರಗೊಂಡು ನಾನೂ ಸೇರಿದಂತೆ ಹಲವು ಮಂದಿ ಬೆಂಬಲಿಗರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವುದಾಗಿ ತಿಳಿಸಿದರು. ಜಿ.ಟಿ.ದೇವೇಗೌಡರನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿ ಅವರನ್ನು ರಾಜ್ಯದ ಸಿಎಂ ಮಾಡುವುದಾಗಿ ಈ ವೇಳೆ ತಿಳಿಸಿದರು. ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಎಲ್ಲಾ ಸಮಾಜದ ಮುಖಂಡರು ಜೆಡಿಎಸ್‍ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕಾಂಗ್ರೆಸ್‍ನ ದುರಾಡಳಿತದಿಂದ ಬೇಸತ್ತು ಜೆಡಿಎಸ್‍ಗೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಮಂದಿ ಸೇರಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನಮ್ಮ ಮತದಾರರ ಇಚ್ಛೆಯಾಗಿದೆ ಎಂದು ತಿಳಿಸಿದರು.
Comments