ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿ ಕೆಣಕಬೇಡಿ-ಹುಷಾರ್..!! ಸಿದ್ದುಗೆ ಎಚ್’ಡಿಕೆ ಕೊಟ್ಟರು ಖಡಕ್ ಎಚ್ಚರಿಕೆ..!

ಕರ್ನಾಟಕ ಚುನಾವಣಾ ಮಹಸಮರಕ್ಕೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ರಾಜಕೀಯ ಅಖಾಡ ರಂಗೇರುತ್ತಿದೆ. ಅದರಲ್ಲೂ ಮೈಸೂರು ರಾಜಕೀಯ ಈಗ ರಾಜ್ಯ ಮಾತ್ರವಲ್ಲದೆ ದೇಶದ ಗಮನ ಸೆಳೆಯುತ್ತಿದೆ. ಇತ್ತೀಚೆಗಷ್ಟೇ ತವರು ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ನಡೆಸಿದ ಬೆನ್ನಲ್ಲೇ, ಮೈಸೂರಿನಲ್ಲಿ ಕುಮಾರಪರ್ವದ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸಮಾವೇಶದ ಉದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ದವೇ ಹರಿಹಾಯ್ದ ಕುಮಾರಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಣದ ಮದದಿಂದ ಗೆಲ್ಲುವ ಹುನ್ನಾರ ನಡೆಸಿದ್ದೀರಿ, ಅಖಾಡಕ್ಕೆ ಬನ್ನಿ ಪಾಠ ಕಲಿಸಲು ಜನತೆ ಕಾದು ಕುಳಿತಿದ್ದಾರೆ ಎಂದು ಸವಾಲು ಹಾಕಿದರು. ಅಲ್ಲದೆ, ಜೆಡಿಎಸ್ ಹಾಗೂ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿ ಕೆಣಕದಿರಿ ಹುಷಾರ್ ಎಂದು ಖಡಕ್ ಎಚ್ಚರಿಕೆ ನೀಡಿದರು.
Comments