ಸಣ್ಣ ಸಮುದಾಯವನ್ನು ಗುರುತಿಸಿ ಶ್ರೇಯ ಕಾಂಗ್ರೇಸ್ ಸರ್ಕಾರದ್ದು: ಚಲನ ಚಿತ್ರ ನಟ ಎಂ.ಎಸ್ ಮುತ್ತುರಾಜ್







ಕೊರಟಗೆರೆ ಮೇ. 2:- ಸಣ್ಣ ಸಮುದಾಯಗಳಿಗೂ ಕಾಂಗ್ರೇಸ್ ಸರ್ಕಾರ ಹೆಚ್ಚನ ಆಧ್ಯತೆಯನ್ನು ನೀಡಿದೆ ಆದ್ದರಿಂದಲೇ ನಾವೆಲ್ಲರೂ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ರಾಜ್ಯ ಕೆಪಿಸಿಸಿ ಒಬಿಸಿ ಉಪಾಧ್ಯಕ್ಷರೂ ಆದ ಚಲನ ಚಿತ್ರ ನಟ ಎಂ.ಎಸ್ ಮುತ್ತುರಾಜ್ ತಿಳಿಸಿದರು. ಪಟ್ಟಣದ ಕೆಎಸ್ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರು ಸಮಾಜದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲ ಸವಿತಾ ಸಮಾಜ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗಿತ್ತು ಇದಕ್ಕಾಗಿಯೇ ಕಾಂಗ್ರೇಸ್ ಸರ್ಕಾರ ಸಮುದಾಯವನ್ನು ಗುರುತಿಸುವ ನಿಟ್ಟಿನಲ್ಲಿ ಹಡಪದ ಅಪ್ಪಣ್ಣ ಜಯಂತಿಯನ್ನು ಸರ್ಕಾರದ ವತಿಯಿಂದ ಮಾಡಿಸಿ ಸಮುದಾಯ ಮುಖ್ಯವಾಹಿನಿಗೆ ಬರಲು ಅನುವು ಮಾಡಿಕೊಟ್ಟಿದ್ದು , ಅದೇ ರೀತಿ ಸವಿತಾ ಸಮಾಜದ ಅಭಿವೃದದದ್ಧಿಗಾಗಿಯೇ ಬೆಂಗಳೂರಿನಲ್ಲಿ 1 ಎಕೆರೆ 20 ಗುಂಟೆ ಜಮೀನು ನೀಡಿದ್ದಾರೆ ಸಮುದಾಯ ಎಂದೆದ್ದೂ ಕಾಂಗ್ರೇಸ್ ಸರ್ಕಾರಕ್ಕೆ ಚಿರರುಣಿಯಾಗಿರಬೇಕು ಎಂದರು.
ಸಮಾಕ್ಕೆ ನೋವು ಉಂಟು ಮಾಡುತ್ತಿದ್ದ ಹಜಾಮ ಎಂದು ಸಂಬೋದಿಸುವಂತಹ ಪದವನ್ನು ನಿಷೇದಿಸಿದ್ದು , 25 ಕೋಟಿ ಸಮಾಜಕ್ಕೆ ಅನುಧಾನ, ಸಮಾಜಕ್ಕಾಗಿಯೇ ಸಂಗೀತ ಶಾಲೆ, ಕ್ಷೌರಿಕರಿಗೆ ಕ್ಷೌರಿಕ ಸಲಕರಣೆಗಳ ಕಿಟ್ ಸೇರಿದಂತೆ ದೇವರಾಜ್ ಅರಸ್ ನಿಗಮದ ವತಿಯಿಂದ ಅನೇಕ ಸವಲತ್ತುಗಳನ್ನು ನೀಡಿರುವುದರ ಮಾಹಿತಿಯನ್ನು ನೀಡಿದರು.
ಸವಿತಾ ಸಮಾಜ ಕಾಂಗ್ರೇಸ್ ಬೆಂಬಲಕ್ಕೆ ನಿಂತಿದ್ದು ರಾಜ್ಯದ ಪ್ರತೀ ಕ್ಷೇತ್ರದಲ್ಲಿಯೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದು ನಮ್ಮ ಸಮುದಾಯದ ಬೆಂಬಲ ಕಾಂಗ್ರೇಸ್ ಪಕ್ಷಕ್ಕೆ ಎಂದರು.
ಈ ಬಾರಿ ಸ್ಪಷ್ಟ ಬಹುತದೊಂದಿಗೆ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಸಿದ್ದರಾಮಯ್ಯ ಮತ್ತು ಕೆಪಿಸಿ ಅಧ್ಯಕ್ಷ ಪರಮೇಶ್ವರ್ ಆಡಳಿತದಲ್ಲಿ ನೀಡಿರುವಂತಹ ಯೋಜನೆಗಳು ಅತ್ಯುತ್ತಮವಾಗಿದ್ದು ಕೊರಟಗೆರೆ ಕ್ಷೇತ್ರದಿಂದ ಪರಮೇಶ್ವರ್ ಗೆ ಮತ ಹಾಕುವುದರ ಮೂಲಕ ಕಾಂಗ್ರೇಸ್ ಬೆಂಬಲಿಸಬೇಕು ಎಂದು ಕೌಶಲ್ಯಾಭಿವೃದ್ಧಿ ನಿಮಗದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸವಿತಾ ಸಮಾಜ ಅಧ್ಯಕ್ಷ ಸಿದ್ದರಾಜು, ಮುಖಂಡರಾದ ನರಸಿಂಹಮೂರ್ತಿ, ವೆಂಕಟೇಶ್ ಬಂಡಾರಿ, ಕೃಷ್ಣಮೂರ್ತಿ, ಕೆ.ಆರ್ ರಾಘವೇಂದ್ರ, ದಿಲೀಪ್, ಲಕ್ಷ್ಮಿಕಾಂತ ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)
Comments