ಮನೋಜ್ ಕುಮಾರ್ ದ್ಚಿತೀಯ ಪಿಯೂ ವಿಜ್ಞಾನದಲ್ಲಿ ಗ್ರಾ.ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ಆರನೇ ಸ್ಥಾನ
ದೊಡ್ಡಬಳ್ಳಾಪುರ ನಗರದ ವಿದ್ಯಾನಗರದಲ್ಲಿರುವ ನೇಕಾರ ದಂಪತಿಗಳಾದ ಡಿ.ಎಸ್.ಸತ್ಯನಾರಾಯಣ ಹಾಗೂ ಶಶಿಕಲಾರ ಪುತ್ರ ಮನೋಜ್ ಕುಮಾರ್ ವಿದ್ಯಾ ನಿಧಿ ಪಿಯೂ ಕಾಲೇಜಿನಲ್ಲಿ ಓದಿದ ಈತ ವಿಜ್ಞಾನ ವಿಭಾಗದಲ್ಲಿ 6೦೦ಕ್ಕೆ 59೦ ಅಂಕ ಗಳಿಸುವುದರ ಮೂಲಕ ಗ್ರಾ.ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ಆರನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾನೆ. ಕಾಲೇಜಿನ ಪಾಠದಲ್ಲಿ ವಿಶ್ವಾಸ ಇಟ್ಟು ಯಾವುದೇ ಟ್ಯೂಷನ್ಗೆ ಹೋಗದೆ ಸಾಧನೆ ಮಾಡಿರುವುದು ವಿಶೇಷ, ತನ್ನ ಬಿಡುವಿನ ಸಮಯದಲ್ಲಿ ನೇಕಾರಿಕೆಯಲ್ಲಿ ಸಹಾಯಮಾಡುತ್ತಾ ದಿನಕ್ಕೆ 5 ಘಂಟೆ ಅಭ್ಯಾಸದಲ್ಲಿ ತೊಡಗಿ ಸಾಧನೆ ಮಾಡಿದ್ದಾನೆ. ಕನ್ನಡದಲ್ಲಿ 98, ಇಂಗ್ಲಿಷ್ 94, ಭೌತಶಾಸ್ತ್ರ1೦೦ ರಸಾಯನಶಾಸ್ತ್ರ 1೦೦, ಗಣಿತ 99, ಜೀವಶಾಸ್ತ್ರ 99 ಅಂಕಗಳನ್ನು ಪಡೆದು ಒಟ್ಟು ೫೯೦ ಹಾಗೂ ಶೇ. 98.33 ಗಳಿಸಿದ್ದಾನೆ. ಭವಿಷ್ಯದಲ್ಲಿ ವೈದ್ಯನಾಗುವ ಕನಸಿದ್ದು ಅಪ್ಪ-ಅಮ್ಮ ಕೂಡಾ ಅದೇ ವಿಶ್ವಾಸದಲ್ಲಿದ್ದಾರೆ, ಈತನ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ಹರಿದು ಬಂದಿದೆ.
News by: Ravikiran K R
Comments