ಜೆಡಿಎಸ್ ಪರ ಪ್ರಚಾರ ಮಾಡಲು ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್‌ವುಡ್ ಸ್ಟಾರ್...!!



ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಸ್ಯಾಂಡಲ್ ವುಡ್ ನ ನಟ- ನಟಿಯರು ಜೆಡಿಎಸ್ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ. ಚುನಾವಣಾ ಪ್ರಚಾರ ಅಖಾಡಕ್ಕೆ ಸ್ಯಾಂಡಲ್‌ವುಡ್ ರಾಂಕಿಂಗ್ ಸ್ಟಾರ್ ಯಶ್ ಎಂಟ್ರಿ ಕೊಟ್ಟಿದ್ದಾರೆ. ಕೆ.ಆರ್. ನಗರ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಅಭ್ಯಥಿ೯ ಸಾ. ರಾ. ಮಹೇಶ್ ಪರವಾಗಿ ನಟ ಯಶ್ ಪ್ರಚಾರಕ್ಕಿಳಿದ್ದಿದ್ದಾರೆ.
ಇಂದು ಬೆಳಿಗ್ಗೆ ಕೆ.ಆರ್. ನಗರದಲ್ಲಿರುವ ಸಾ. ರಾ. ಮಹೇಶ್ ನಿವಾಸಕ್ಕೆ ಯಶ್ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಅಬ್ಬರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆ ಆರ್ ನಗರದ ತೋಪಮ್ಮ ದೇವಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ ಯಶ್, ತೆರೆದ ವಾಹನದಲ್ಲಿ ಸುಡು ಬಿಸಿಲನ್ನೂ ಲೆಕ್ಕಿಸಿದೇ ಸಾ ರಾ ಮಹೇಶ್ ಗೆ ಮತ ಹಾಕುವಂತೆ ಮನವಿ ಮಾಡಿದರು. ಯಶ್ ಪ್ರಚಾರಕ್ಕಿಳಿಯುತ್ತಿದ್ದಂತೆ ಕಾಯ೯ಕತ೯ರು ಹಾಗೂ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗ್ಗಿಬಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಿದ ಪೊಲೀಸರು ಪ್ರಚಾರದ ವಾಹನ ತೆರಳಲು ಅನುಕೂಲ ಮಾಡಿಕೊಟ್ಟರು. ಇದೇ ವೇಳೆ ಮಾತನಾಡಿದ ಯಶ್, ನಾನು ಯಾವುದೇ ರಾಜಕೀಯ ಪಕ್ಷ ಹಾಗೂ ಆ ಪಕ್ಷದ ಸಿದ್ದಾಂತಗಳಿಗೆ ಬೆಂಬಲ ಸೂಚಿಸಿಲ್ಲ. ಆದರೆ ಕೆ.ಆರ್.ನಗರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಸಾ.ರಾ. ಮಹೇಶ್ ನನ್ನ ಸ್ನೇಹಿತರು ಹಾಗೂ ಬಹಳ ಪರಿಚಯಸ್ಥರು. ಹಾಗಾಗಿ ಅವರ ಪರ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನನ್ನ ಸ್ನೇಹಿತರ ಇರುವ ಕ್ಷೇತ್ರದಲ್ಲಿ ನಾನು ಪ್ರಚಾರ ಮಾಡುತ್ತೇನೆ. ಯವಕರು ಜನಪರ ಕಾಳಜಿ ಹಾಗೂ ಕೆಲಸ ಮಾಡುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನಾನು ರಾಜಕೀಯ ಬರಬೇಕು ಅಂತಾ ಅಂದ್ಕೊಂಡಿಲ್ಲ. ಸದ್ಯ ನನ್ನ ಕೆಲಸಗಳಲ್ಲಿ ಬ್ಯುಸಿ ಇದ್ದೇನೆ. ಅದ್ರೆ ನನ್ನ ವಿಷಯಕ್ಕೆ , ನನ್ನ ಕನಸುಗಳಿಗೆ ಪೂರಕವಾಗಿದ್ದರೆ ಅವರಿಗೆ ನಾನು ಬೆಂಬಲ ನೀಡುತ್ತೇನೆ. ಸಾ ರಾ ಮಹೇಶ್ ಅವರನ್ನ ಬೆಂಬಲಿಸಿ, ಅವರೊಂದಿಗೆ ನಾನೂ ಇರುತ್ತೇನೆ ಎಂದು ಹೇಳಿದರು.
Comments