ಜಮೀರ್ ನನ್ನು ಬುಡ ಸಮೇತ ಕಿತ್ತು ಹಾಕಲು ದೇವೇಗೌಡ್ರ ಮಾಸ್ಟರ್ ಪ್ಲಾನ್..!!



ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚುತ್ತಿದೆ. ಜೆಡಿಎಸ್‌ಗೆ ಬಿಎಸ್‍ಪಿ ಜೊತೆ ಎಂಐಎಂ ಪಕ್ಷದ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಬೆಂಬಲವು ಸಿಕ್ಕಿದ್ದು, ಮೇ 4ರಿಂದ ಓವೈಸಿ ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್‌ಗೆ ಬೆಂಬಲ ನೀಡಲು ಒಪ್ಪಿರುವ ಓವೈಸಿ, ಜೆಡಿಎಸ್ ಪರವಾಗಿ ಮೇ 4 ರಿಂದ ಮುರ್ನಾಲ್ಕು ದಿನಗಳ ಕಾಲ ಮುಸ್ಲಿಂ ಮತಗಳಿರುವ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಪಣ ತೊಟ್ಟಿರುವ ಜೆಡಿಎಸ್‌ಗೆ ಮತ್ತೊಂದು ಬೆಂಬಲದ ರಕ್ಷೆ ಸಿಕ್ಕಂತಾಗಿದೆ. ಈಗಾಗಲೇ ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ರಾಜ್ಯಾದ್ಯಂತ ಪ್ರಚಾರದಲ್ಲಿ ತೊಡಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಸ್ಲಿಂಮರು ಹೆಚ್ಚಿರುವ ಕಡೆ ಓವೈಸಿಯಿಂದ ಪ್ರಚಾರ ಮಾಡಿಸಲು ಜೆಡಿಎಸ್ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಲ್ಲದೆ ಬಂಡಾಯ ಶಾಸಕ ಜಮೀರ್ ಅಹಮದ್ ಕ್ಷೇತ್ರವಾದ ಚಾಮರಾಜಪೇಟೆಯಲ್ಲಿ ಹೆಚ್ಚು ಪ್ರಚಾರ ಮಾಡಿಸಿ ಜಮೀರ್‌ಗೆ ಪಾಠ ಕಲಿಸುವುದು ದೇವೇಗೌಡರ ಯೋಜನೆಯಾಗಿದೆ ಎಂದು ತಿಳಿದುಬಂದಿದೆ. ಬಳ್ಳಾರಿ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲೂ ಓವೈಸಿ ಪ್ರಚಾರಕ್ಕೆ ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಗೊತ್ತಾಗಿದೆ.
Comments