ಭಾಗ್ಯಗಳ ಬಾಗಿಲು ತೆರೆದು ಒಂದು ಬಾರಿ ಅವಕಾಶ ಕೋರಿದ ಕುಮಾರಸ್ವಾಮಿ
ಇಂದು ದೊಡ್ಡಬಳ್ಳಾಪುರದಲ್ಲಿ ನಡೆದ ಕುಮಾರಪರ್ವ ಬಹಿರಂಗ ಸಭೆಯಲ್ಲಿ ನಾಡಿನ ಜನರಿಗೆ ಭಾಗ್ಯಗಳ ಮಳೆಯನ್ನೇ ಸುರಿಸಿದರು, ರೈತರ 51 ಸಾವಿರಕೋಟಿ ಸಾಲ ಮನ್ನಾ ಅಧಿಕಾರಕ್ಕೆಬಂದ 24 ಘಂಟೆಗಳಲ್ಲಿ, ನೇಕಾರರ, ಮೀನುಗಾರರ, ಕುಶಲ ಕರ್ಮಿಗಳ ಸಾಲ ಮನ್ನಾ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಹಿರಿಯ ನಾಗರೀಕರಿಗೆ 5000 ರೂ. ಪಿಂಚಣಿ, ಬಿಪಿಎಲ್ ಕುಟುಂಬದವರಿಗೆ 3 ಲಕ್ಷದವರೆಗೆ ಉಚಿತ ಚಿಕಿತ್ಸೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ, ಅಂಗವಿಕಲರಿಗೆ ಮಾಶಾಸನ, ಗರ್ಭಿಣಿಯರಿಗೆ ಪ್ರತಿ ತಿಂಗಳು 5೦೦೦ ಸಾವಿರ ಸಹಾಯಧನ, ಅಂಗವಿಕಲರಿಗೆ ಮಾಶಾಸನ, ದೀಪಾವಳಿ ಹಬ್ಬಕ್ಕೆ 1೦೦೦ ರೂ ಸಹಾಯಧನ, ವಿದ್ಯಾವಂತ ಯುವಕ/ಯುವತಿಯರಿಗೆ ಕನಿಷ್ಠ 1 ಕೋಟಿ ಉದ್ಯೋಗ, ಸ್ಥಳಿಯರಿಂದ ಗಿಡ ನೆಡುವ ಕೆಲಸಕ್ಕೆ 5 ಲಕ್ಷ ಕನ್ನಡಿಗರಿಗೆ ಉದ್ಯೋಗ ಸೇರಿದಂತೆ ಭಾಗ್ಯಗಳ ಬಾಗಿಲನ್ನು ತೆರೆದು ಈ ಬಾರಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡುವಂತೆ ಕೋರಿದರು. ತಾಲ್ಲೂಕಿನ ಜೆಡಿಎಸ್ ಅಭ್ಯರ್ಥಿ ಮುನೇಗೌಡರು, ಅಪ್ಪಯ್ಯಣ್ಣ, ತಾಲ್ಲೂಕು ಕಾರ್ಯಾಧ್ಯಕ್ಷ ಕೆಂಪರಾಜು, ನಗರ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ್, ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಅಖಿಲೇಶ್, ನಗರಸಭಾ ಸದಸ್ಯ ಶಿವಕುಮಾರ್ ಸೇರಿದಂತೆ ಎಲ್ಲಾ ಮುಖಂಡರುಗಳು ಹಾಜರಿದ್ದರು
Comments