ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದುಗೆ ಎದುರಾದ ಬಿಗ್ ಶಾಕ್... ಏನು ಗೊತ್ತಾ?
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗುತ್ತಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದ ಕಾವು ಹೆಚ್ಚಾಗುತ್ತಿದೆ. ಚಾಮುಂಡೇಶ್ವರಿ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇರಿಸುಮುರಿಸು ಎದುರಿಸಿದರು.
ಕ್ಷೇತ್ರದ ಹಳೆಕೆಸರೆಯಲ್ಲಿ ಸಿಎಂ ಪ್ರಚಾರ ನಡೆಸುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಗೆ ಜೈಕಾರ ಹಾಕಿದರು. ಇದನ್ನು ಕಂಡ ಸಿಎಂ, ಗ್ರಾಪಂ ಸದಸ್ಯನಿಗೆ ಹೋಗಯ್ಯ ಅವರಿಗೆ ವೋಟ್ ಹಾಕು ಎಂದರು. ಹಳೆಕೆಸರೆಯ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯ ಮರಿಸ್ವಾಮಿ ಎಂಬುವವರು ರಸ್ತೆ ಮಧ್ಯೆಯೇ ತೆರೆದ ವಾಹನದಲ್ಲಿದ್ದ ಸಿಎಂಗೆ ನೇರವಾಗೇ ಉತ್ತರಿಸಿದರು. ತಮ್ಮೊಂದಿಗಿದ್ದ ಹಲವರ ಜೊತೆ ಕೂಡಿಕೊಂಡು ಜೆಡಿಎಸ್ಗೆ ಜೈಕಾರ ಹಾಕಿದರು. ನಾನು ಕಾಂಗ್ರೆಸ್ಗೆ ಬರಲ್ಲ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇವಿ ಎಂದು ಮರಿಸ್ವಾಮಿ ಹೇಳಿದರು. ಇನ್ನು ಇದನ್ನು ಕಂಡು ಶಾಕ್ ಕಾದ ಸಿಎಂ ಸ್ಥಳದಿಂದ ನಿರ್ಗಮಿಸುವವರೆಗೂ ಮರಿಸ್ವಾಮಿ ಬೆಂಬಲಿಗರೊಂದಿಗೆ ಸೇರಿ ಸಿಎಂಗೆ ಧಿಕ್ಕಾರ ಕೂಗಿದರು.
Comments