ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜ್ ದ್ವಿತೀಯ ಪಿಯೂ ಶೇ. 65.55 ಫಲಿತಾಂಶ, ಎಂ.ಯಶವಂತ್ ಕಾಲೇಜಿನ ಟಾಪರ್





ನಗರದ ಹೆಸರಾಂತ ಶ್ರೀ ಕೊಂಗಾಡಿಯಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2017-18 ಸಾಲಿನಲ್ಲಿ ಶೇ. 65.55 ಫಲಿತಾಂಶ ದಾಖಲಿಸುವುದರೊಂದಿಗೆ, ಆರ್ಟ್ಸ್ 2, ವಾಣಿಜ್ಯ 49 ಹಾಗೂ ವಿಜ್ಞಾನದಲ್ಲಿ 30 ಮಂದಿ ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎಂ. ಯಶವಂತ್ ಪಿ.ಸಿ.ಎಂ.ಸಿಎಸ್.ನಲ್ಲಿ 579 ಅಂಕ ಗಳಿಸಿ [ಬೌತಶಾಸ್ತ್ರ 1೦೦/ ಗಣಕ ವಿಜ್ಞಾನ 1೦೦] ಕಾಲೇಜಿನ ಟಾಪರ್ ಆಗಿದ್ದಾರೆ. ವಾಣಿಜ್ಯ ಶಾಸ್ತ್ರದಲ್ಲಿ ಕೀರ್ತಿ ಪಿ.ಎಲ್. 578 ಅಂಕಗಳಿಸಿದ್ದಾರೆ, [ ಸಂಖ್ಯಾ ಶಾಸ್ತ್ರ 1೦೦/ ಗಣಕ ವಿಜ್ಞಾನ 1೦೦] ಪ್ರೇಮಾ ಟಿ.ಕೆ. 537 ಅಂಕ ಗಳಿಸಿ ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಆರ್ಟ್ಸ್ ನಲ್ಲಿ ಶೇ.52.31%, ವಾಣಿಜ್ಯದಲ್ಲಿ ಶೇ.66% ಮತ್ತು ವಿಜ್ಞಾನದಲ್ಲಿ ಶೇ.74.% ಸಾಧಿಸುವುದರೊಂದಿಗೆ ತಾಲ್ಲೂಕಿನಲ್ಲಿ ಕಾಲೇಜು 3ನೇ ಸ್ಥಾನ ಗಳಿಸಿದೆ.
Comments