ನಿದ್ದೆ, ಸೋಮಾರಿತನ, ದುರಹಂಕಾರ ಹಾಗೂ ಭ್ರಷ್ಟಾಚಾರದ ದುರಾಡಳಿತ ನಡೆಸುತ್ತಿರುವ ಸಿದ್ದರಾಮಯ್ಯ.... ಅನಂತಕುಮಾರ್ ವ್ಯಂಗ್ಯ
ಮೂವತ್ತು ವರ್ಷಗಳಿಂದ ಕೈಹಿಡಿದು ಗೆಲ್ಲಿಸಿದ್ದ ಕ್ಷೇತ್ರವನ್ನು ಬಿಟ್ಟು ಬಾದಾಮಿಗೆ ತೆರಳಿರುವ ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಪಲಾಯನವಾದಿ ಎಂದು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ತಿಳಿಸಿದರು. ದೊಡ್ಡಬಳ್ಳಾಪುರ ದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಜೆ. ನರಸಿಂಹಸ್ವಾಮಿ ಪರ ಪ್ರಚಾರ ನಡೆಸಿದರು, ದುರಾಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಇಂತಹ ದುರಾಡಳಿತವನ್ನು ಕಿತ್ತೊಗೆಯಲು ರಾಜ್ಯದ ಜನರು ಸಿದ್ದವಾಗಿದ್ದಾರೆ ಎಂದು ಹೇಳಿದರು. ರೈತರು ಹಾಗೂ ನೇಕಾರರ ಅಭಿವೃದ್ದಿಗೆ ಭಾರತೀಯ ಜನತಾ ಪಕ್ಷ ಬದ್ದವಾಗಿದೆ, ಅಧಿಕಾರಕ್ಕೆ ಬಂದ ಕೂಡಲೇ ನೇಕಾರರ ಸಾಲ ಮನ್ನಾ ಮಾಡುವುದಾಗಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ತಪ್ಪಿಸುವ ದೃಷ್ಟಿಯಿಂದ ಕೇಂದ್ರ ಸರಕಾರ 17 ಸಾವಿರ ಕೋಟಿ ರೂಪಾಯಿಗಳ ಸಬ್ ಅರ್ಬನ್ ರೈಲು ಯೋಜನೆಯನ್ನು ಪ್ರಕಟಿಸಿದೆ. ಇದು ಇನ್ನು ಕೆಲವೇ ವರ್ಷಗಳಲ್ಲಿ ಅನುಷ್ಠಾನಗೊಳ್ಳಲಿದೆ. ಇದರಿಂದಾಗಿ ದೊಡ್ಡಬಳ್ಳಾಪುರ, ನೆಲಮಂಗಲ, ಕೆಂಗೇರಿ, ಬಂಗಾರಪೇಟೆ ಹಾಗೂ ಬಿಡದಿಯ ನಾಗರಿಕರಿಗೆ ಅನುಕೂಲವಾಗಲಿದೆ. ಈ ಯೋಜನೆ ಸಂಪೂರ್ಣ ಸಂಪೂರ್ಣಗೊಂಡ ನಂತರ ಮುಂಬಯಿ ಮಾದರಿ ಲೋಕಲ್ ಟ್ರೈನ್ಗಳು ಸಂಚರಿಸಲಿವೆ ಎಂದು ವಿವರಿಸಿದರು.
ಬಿಜೆಪಿಯ 150 ಸ್ಥಾನಗಳ ಗುರಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗೊಂದಲ ಉಂಟುಮಾಡಲು ಪ್ರಯತ್ನಿಸುತ್ತಿವೆ. ಆದರೆ, ದೇಶದಾದ್ಯಂತ ಮೋದಿ ಅಲೆ ಇದ್ದು ಅಭಿವೃದ್ದಿ ಪರವಾದ ಒಲವು ಕಂಡಬರುತ್ತಿದೆ, ಕರ್ನಾಟದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಜಯ ದೊರೆಯಲಿದೆ ಎಂದು ಹೇಳಿದರು.
Comments