ಚಾರ್ಜ್‌ಶೀಟ್ ಬಿಡುಗಡೆ ಮಾಡುವ ಮೂಲಕ ಸಿದ್ದುಗೆ ತಿರುಗೇಟು ಕೊಟ್ಟ ಎಚ್'ಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು 15 ಅಂಶಗಳ ಚಾರ್ಜ್‌ಶೀಟ್ ಬಿಡುಗಡೆಗೊಳಿಸಿದ್ದಾರೆ. ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೊಂದಿಗೆ ಪ್ರಯಾಣ ಮಾಡಿದ್ದಾರೆ ಎಂಬ ಮುಖ್ಯಮಂತ್ರಿಗಳ ಆರೋಪವನ್ನು ಗಂಭಿರವಾಗಿ ಪರಿಗಣಿಸಿರುವ ಅವರು, 15 ಅಂಶಗಳ ಚಾರ್ಜ್‌ಶೀಟ್ ಬಿಡುಗಡೆಗೊಳಿಸುವ ಮೂಲಕ ಮುಖ್ಯಮಂತ್ರಿಗಳಿಗೆ ತಿರುಗೇಟು ನೀಡಿದ್ದಾರೆ.
ರಾಜ್ಯ ಅಭಿವೃದ್ಧಿಯ ಚರ್ಚೆ ಬಿಟ್ಟು ಇತರರ ಮೇಲೆ ಪೊಳ್ಳು ಆರೋಪ ಮಾಡುವುದನ್ನು ಕಾಂಗ್ರೆಸ್‌ನವರು ರೂಢಿಸಿಕೊಂಡಿದ್ದು, ಆರೋಪ ಮಾಡುವಾಗ ತನ್ನ ಅಡಿಯಲ್ಲೇ ನಾರುತ್ತಿರುವ ತಪ್ಪುಗಳನ್ನು ಕಾಂಗ್ರೆಸ್ ಮರೆಯುತ್ತಿದೆ. ಕಾಂಗ್ರೆಸ್‌ನ ಪ್ರಮಾದಗಳನ್ನು ನಾಡಿನ ಜನರಿಗೆ ತಿಳಿಸಲು ಈ ಚಾರ್ಜ್ ಶೀಟ್‌ನ್ನು ಜನತಾ ನ್ಯಾಯಾಲಯಕ್ಕೆ ಸಲ್ಲಿಸುತ್ತಿದೆ. ಜನತೆ ಇದರ ನ್ಯಾಯ ಪರಾಮರ್ಶೆ ಕಾಂಗ್ರೆಸ್‌ಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾರೆ.
ಚಾರ್ಜ್‌ಶೀಟ್‌ನ ಪ್ರಮುಖ ಅಂಶಗಳು:
- ನಾನು ಅಮಿತ್ ಷಾ ಜತೆ ವಿಮಾನದಲ್ಲಿ ಒಟ್ಟಿಗೇ ಪ್ರಯಾಣಿಸಿದ ಫೋಟೊ ನಿಮ್ಮ ಬಳಿ ಇದೆಯೇ ಸಿದ್ದರಾಮಯ್ಯನವರೇ?
- ಲಿಂಗಾಯತ ವೀರಶೈವ ಸಮುದಾಯವನ್ನು ಒಡೆದಿದ್ದು ತತ್ವದ ಮೇಲಾ ?
- ಒಡೆಯುವುದು, ಓಲೈಸುವುದೇ ಜಾತ್ಯತೀತತೆಯೇ?
- ಜ್ಯಾತ್ಯತೀತತೆ ಪ್ರತಿಪಾದಕರಿಗೆ ನಿಮ್ಮ ಸರ್ಕಾರ ಕೊಟ್ಟ ರಕ್ಷಣೆ ಎಂಥದ್ದು?
- ಸತ್ಯದ ಮೇಲೆ ಪ್ರಮಾಣ ಮಾಡಿದವರು ಸತ್ಯದ ಕೆಲಸ ಮಾಡಿದರೇ?
- 70 ಲಕ್ಷ ರು. ವಾಚ್ ಖರೀದಿಸಿದ್ದೋ? ಕಿಕ್ ಬ್ಯಾಕ್ ಕೊಡುಗೆಯೋ?
- ಸಂವಿಧಾನಕ್ಕೆ ಅಗೌರವ, ಅಪಚಾರ ಬಗೆದ ಕುಟುಂಬ ಕಾಂಗ್ರೆಸ್
- ನಿಮ್ಮ ಅಡಿಯಲ್ಲೇ ಇದ್ದಾರೆ ಅತ್ಯಾಚಾರಿಗಳು
- ಸಾಲ ಮನ್ನಾ ತೋರಿಸಿ ವಂಚನೆ
- ಬೃಹತ್ ಹಗರಣಗಳಿಗೆ ಸ್ಟೀಲ್ ಬ್ರಿಡ್ಜ್ ಒಂದೇ ಸಾಕು
- ನಿಮ್ಮಲ್ಲೇ ಗೂಂಡಾಗಳು. ನಿಮ್ಮಿಂದ ರಕ್ಷಣೆ ಸಿಕ್ಕಿದ್ದು ನಿಜವೇನಾ
- ಡೈರಿಯಲ್ಲಿ ಬರೆದ ಕತೆ ಏನಾಯ್ತು?
- ಮಹದಾಯಿ ವಿವಾದದಲ್ಲಿ ಕಾಂಗ್ರೆಸ್ ಎ1ಆರೋಪಿ
- ದೊಡ್ಡ ನಾಯಕರನ್ನೇ ಮೂಲೆಗೆ ಸರಿಸಿ, ಅವರು ಪ್ರತಿನಿಧಿಸುವ ಸಮುದಾಯಕ್ಕೆ ದ್ರೋಹ ಬಗೆದವರು ನೀವು ದಲಿತ ಸಮುದಾಯದ ವಿ.ಶ್ರೀನಿವಾಸ ಪ್ರಸಾದ್, ಕುರುಬ ಸಮುದಾಯದ, ಸಿದ್ದರಾಮಯ್ಯರಿಗಿಂತ ಹಿರಿಯ ನಾಯಕ ಎಚ್.ವಿಶ್ವನಾಥ್, ಒಕ್ಕಲಿಗ ಸಮುದಾಯದ ಹಿರಿಯ ನಾಯಕ ಎಸ್.ಎಂ ಕೃಷ್ಣ ಹಾಗೂ ಅಂಬರೀಷ್ ಇವರನ್ನೆಲ್ಲ ಎಷ್ಟು ನಿರ್ದಾಕ್ಷಿಣ್ಯವಾಗಿ ಮುಗಿಸಿತು ಈ ಕಾಂಗ್ರೆಸ್?
- ಉಪವಾಸ ಮಾಡಿ ಬಡವರ ಹಸಿವನ್ನೇ ಅಣಕಿಸಿದಿರಲ್ಲ
Comments