ವಿಜೃಂಭಣೆಯಿಂದ ನಡೆದ ದ್ರೌಪದಾದೇವಿ ಕರಗ ಮಹೋತ್ಸವ
ನಗರದ ಚಿಕ್ಕಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಶ್ರೀ ಆದಿಶಕ್ತ್ಯಾತ್ಮಕ ದ್ರೌಪದಿ ದೇವಿ ಕರಗ ಮಹೋತ್ಸವ ಭಾನುವಾರ ನಡೆಯಿತು, ಇದರ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಬೆಳಿಗ್ಗೆ 8-30 ರಿಂದ ಮುತ್ಯಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ, 10 ರಿಂದ 12 ಶ್ರೀ ಲಲಿತಾ ಹೋಮ, ಮಧ್ಯಾನ್ಹ 1 ರಿಂದ 2 ರವರೆಗೆ ಕಲ್ಯಾಣೋತ್ಸವ ನಡೆಸಲಾಯಿತು, ಮಧ್ಯ ರಾತ್ರಿ 12.30ಕ್ಕೆ ಬೇತಮಂಗಲದ ಪೂಜಾರಿ ಬಿ.ವೈ. ರಾಮಚಂದ್ರಪ್ಪ ಕರಗ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಕರಗದ ಪ್ರಯುಕ್ತ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಪೂಜೆ ಹಾಗೂ ರಾತ್ರಿ ದೇವರುಗಳ ಮೆರವಣಿಗೆಯನ್ನು ಎರ್ಪಡಿಸಿದ್ದರು.
Comments