ಗ್ರಾಮಗಳ ಅಭ್ಯುದಯಕ್ಕೆ ಕಾಂಗ್ರೇಸ್ ಬೆಂಬಲಸಿ: ಮುರುಳೀಧರ್ ಹಾಲಪ್ಪ
ಕೊರಟಗೆರೆ ಏ. :- ಪ್ರತೀ ಗ್ರಾಮಗಳಲ್ಲೂ ಉದ್ಯೋಗ ಸೃಷ್ಟಿಯಾಗಬೇಕು... ಗ್ರಾಮಗಳು ಅರ್ಥಿಕ ಸದೃಡತೆ ಕಾಣಬೇಕು.. ಕಡ್ಡಾಯವಾಗಿ ಮತದಾನ ಮಾಡಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಕೌಶಲ್ಯಾಭಿವೃದ್ಧಿ ನಿಮಗದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ತಿಳಿಸಿದರು. ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬ್ಯಾಲ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ಮತ್ತು ಯುವ ಜನತೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮದಲ್ಲಿರುವಂತಹ ಮಕ್ಕಳು ವಿದ್ಯಾವಂತರಾಗಬೇಕು ಮತ್ತು ಉದ್ಯೋಗಸ್ಥರಾಗಬೇಕು... ಎಲ್ಲಾ ಹೆಣ್ಣು ಮಕ್ಕಳು ಕಡ್ಡಾಯವಾಗಿ ಕೌಶಲ್ಯವಂತರಾಗಬೇಕು... ಯಾರೊಬ್ಬರ ಆಶ್ರಯಕ್ಕೆ ಕಾಯದೇ ಸ್ವಾವಲಂಭಿಗಳಾಗಿ ಬದುಕನ್ನು ಕಟ್ಟಿಕೊಳ್ಳುವಂತಹ ಸಾಮಥ್ಯವನ್ನು ರೂಡಿಸಿಕೊಳ್ಳಬೇಕು ನಿಮ್ಮ ಕ್ಷೇತ್ರದ ಶಾಸಕ ಹೇಗಿರಬೇಕು... ಅವರಿಂದ ಹೇಗೆ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎನ್ನುವಂತಹ ಕಲ್ಪನೆಯನ್ನು ಇಟ್ಟುಕೊಂಡು ಮತದಾನ ಮಾಡಬೇಕು ಎಂದರು.
ರಾಜ್ಯದಲ್ಲಿ ಆರ್ಯವೈಶ್ಯ ಸಮುದಾಯವನ್ನು ಸದೃಢಮಾಡಬೇಕು... ಗ್ರಾಮಾಂತರ ಪ್ರದೇಶದಲ್ಲಿರುವ ಸಮುದಾಯ ಇನ್ನೂ ಹೆಚ್ಚು ಸದೃಡವಾಗಿಲ್ಲ ಸಮುದಾಯಕ್ಕೆ ಇನ್ನೂ ಹೆಚ್ಚಿನ ಪ್ರಾತಿನಿಥ್ಯ ನೀಡಬೇಕು ಎಂದು ಆರ್ಯ ವೈಶ್ಯ ಮಂಡಳಿಯ ಮಹಿಳಾ ಸದಸ್ಯೆ ಪಿ.ಎ ಮಂಜುಳಾ ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಮಹಿಳೆಯರು ತಮ್ಮಗೆ ಬೇಕಾಗಿರುವಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸೂಚಿಸಿದರು, ಚುನಾವಣಾ ಪ್ರಚಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಏ.29 ರಂದು ಬ್ಯಾಲ್ಯದಲ್ಲಿ ಸಭೆ ನಡೆಸಲಿದ್ದು ಇಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುಬೇಕೆಂದು ಮನವಿ ಮಾಡಲಾಯಿತು.
ಸಭೆಯಲ್ಲಿ ಆರ್ಯ ವೈಶ್ಯ ಮಂಡಳಿಯ ಮಹಿಳಾ ಅಧ್ಯಕ್ಷೆ ತ್ರೇಜಾವತಮ್ಮ, ಮುಖಂಡರಾದ ಹೆಚ್. ಎ ರಮೇಶ್ ಬಾಬು, ಬಿ.ಎಸ್ ರಾಮಯ್ಯ ಶೆಟ್ಟಿ, ಯಶು, ಕೆ.ಆರ್ ರಾಘವೇಂದ್ರ, ಲಕ್ಷ್ಮಿಕಾಂತ ,ದಿಲೀಪ್, ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)
Comments