ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ

29 Apr 2018 7:25 PM |
1173 Report

ಕೊರಟಗೆರೆ ಏ.:- ಸ್ಥಳೀಯ ಸಮಸ್ಯೆಗಳಿಗೆ ಸಮಸ್ಯೆಗಳನ್ನು ಅರಿತಿರುವಂತಹ ಪಕ್ಷ ಜೆಡಿಎಸ್ ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದು ಶಾಸಕ ಪಿ.ಆರ್ ಸುಧಾಕರ್ ಲಾಲ್ ತಿಳಿಸಿದರು. ತಾಲೂಕಿನ ತೀತಾ ಗ್ರಾ.ಪಂ ವ್ಯಾಪ್ತಿಯ ಕಂಬದಹಳ್ಳಿ, ವೆಂಕಟಾಪುರ, ಗಟ್ಟೋಬನಹಳ್ಳಿ, ವೀರಾಪುರ, ಗೊವನಹಳ್ಳಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

    ನೆರೆಯ ಆಂದ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಮನ್ನಣೆಯನ್ನು ನೀಡುತ್ತಿದ್ದು ಆ ರಾಜ್ಯಗಳು ನಮ್ಮ ರಾಜ್ಯಕ್ಕಿಂತ ಹೆಚ್ಚಿನ ಪ್ರಗತಿಯನ್ನು ಕಾಣುತ್ತಿವೆ ಮತ್ತು ಪ್ರಾದೇಶ ಪಕ್ಷಗಳೇ ಇದ್ದರೆ ಅವುಗಳಿಗೆ ಯಾವುದೇ ಹೈ ಕಮಾಂಡ್ ಸಂಸ್ಕೃತಿ ಅನ್ವಯಿಸುವುದಿಲ್ಲ ನಮ್ಮ ಸಮಸ್ಯೆಯನ್ನು ತಿಳಿಯದ ಹೈಕಮಾಂಡ್ ಗಳು ನೀಡುವಂತಹ ಸಲಹೆ ಸೂಚನೆಗಳಿಗೆ  ತಲೆಯಾಡಿಸುವ ಅವಶ್ಯಕತೆಯಿರುವುದಿಲ್ಲ ಈ ಹಿನ್ನೆಲೆಯಲ್ಲಿ ಸ್ಥಳೀಯ ಪಕ್ಷಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
    ಶಾಸಕರು ಎಂದರೆ ಹೇಗಿರಬೇಕು... ಎಲ್ಲಾ ಸಮಯದಲ್ಲೂ ನಿಮ್ಮೊಟ್ಟಿಗೆ ಹೇಗಿರಬಹದು ಎನ್ನುವುದನ್ನು ಶಾಸಕರಾಗಿ ಪಿ.ಆರ್ ಸುಧಾಕರ್ ಲಾಲ್ ತೋರಿಸಿಕೊಟ್ಟಿದ್ದಾರೆ ನಿಮ್ಮಲ್ಲರ ಆತ್ಮೀಯತೆಯನ್ನು ಗಳಿಸಿದ್ದಾರೆ... ನಿಮ್ಮೆಲ್ಲಾ ಗ್ರಾಮಗಳ... ನಿಮ್ಮೆಲ್ಲರ ಹೆಸರನ್ನು ಬಲ್ಲ ಅಭ್ಯಥರ್ಿಗೆ ಮತ ಹಾಕಬೇಕು ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಜೆ.ಎನ್ ನರಸಿಂಹರಾಜು ಹೇಳಿದರು.
ಪ್ರಚಾರದಲ್ಲಿ ಜಿ.ಪಂ ಸದಸ್ಯರಾದ ಅಕ್ಕಮಹಾದೇವಿ, ಪ್ರೇಮಾ, ಜಿಲ್ಲಾ ಕಾರ್ಯದಶರ್ಿ ಹೆಚ್.ಕೆ ಮಹಾಲಿಂಗಪ್ಪ, ತಾಲೂಕು ಉಪಾಧ್ಯಕ್ಷ ಜಿ.ಎಂ ಕಾಮರಾಜು, ವಕ್ತಾರ ಟಿ. ಲಕ್ಷ್ಮೀಶ್, ಯುವ ಅಧ್ಯಕ್ಷ ಕೋಡ್ಲಹಳ್ಳಿ ವೆಂಕಟೇಶ್, ತೀತಾ ಗ್ರಾ.ಪಂ ಉಪಾದ್ಯಕ್ಷ ನಟರಾಜು, ಸದಸ್ಯ ರವಿವರ್ಮ, ಮುಖಂಡರಾದ ನಳೀನಾ, ಗಡ್ಡೋಬನಹಳ್ಳಿ ರಂಗಧಾಮಯ್ಯ, ದೇವರಾಜು, ಮಾದವಾರ ಸೋಮಣ್ಣ, ನರಸಯ್ಯನಪಾಳ್ಯದ ರಾಜಣ್ಣ, ಬಾಲರಾಜ್, ಕಬಂಹಳ್ಳಿ ಹರೀಶ್, ರಾಮಕೃಷ್ಣಯ್ಯ ಸೇರಿದಂತೆ ಇತರರು ಇದ್ದರು. 

Edited By

Raghavendra D.M

Reported By

Raghavendra D.M

Comments