ಕೊರಟಗೆರೆಯಲ್ನಲಿ ರಸಿಂಹ ಜಯಂತಿ ಆಚರಣೆ

29 Apr 2018 7:21 PM |
649 Report

ಕೊರಟಗೆರೆ ಏ.29:- ಶಾಂತಿ, ಮಾನಸಿಕ ನೆಮ್ಮದಿಗಾಗಿ ಧಾಮರ್ಿಕ ಕಾರ್ಯಕ್ರಮ ಅತ್ಯಾವಶ್ಯಕ ಎಂದು ಸುವರ್ಣಮುಖಿ ಶ್ರೀಲಕ್ಷ್ಮೀನಸಿಂಹಸ್ವಾಮಿ ದೇವಾಲಯದ ಧರ್ಮದಶರ್ಿ ಪುರುಷೋತ್ತಮರಾಜು ತಿಳಿಸಿದರು.


     ಪಟ್ಟಣದ ಹೊರವಲಯದ ಜಂಪೇನಹಳ್ಳಿ ಕೆರೆ ಬಳಿ ಇರುವ ಶ್ರೀಸುವರ್ಣಮುಖಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಅಂಗವಾಗಿ ಏರ್ಪಡಿಸಿದ್ದು ದೇವಾಲಯದ ಅರ್ಚಕದ ಸುಬ್ರಮಣ್ಯಭಟ್ ನೇತೃತ್ವದಲ್ಲಿ ಅಷ್ಟಮುಖ ಗಂಢಭೇರುಂಡ ನರಸಿಂಹ ಹೋಮ ಮತ್ತು ಕಲ್ಯಾಣೋತ್ಸವ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
    ಆಧುನಿಕತೆ, ವೈಜ್ಞಾನೀಕರಣ ದಿಂದ ಸಮಾಜದಲ್ಲಿ ಅನೈತಿಕತೆ, ಅನ್ಯಾಯ, ಆಶಾಂತಿ ಹೆಚ್ಚುತ್ತಿದ್ದು, ವ್ಯಕ್ತಿ-ವ್ಯಕ್ತಿ ನಡುವೆ ಸಂಬಂಧಗಳು ಕ್ಷಿಣಿಸುತ್ತಿವೆ ಇದು ಮಾನವತೆಯ ವಿನಾಶಕ್ಕೆ ಕಾರಣವಾಗುತ್ತಿದ್ದು ಹಣ ಅಧಿಕಾರದ ಸಂಪಾದನೆಯ ಉದ್ದೇಶದಿಂದ ನಾವು ಸಂಸಾರ ಹೀನರಾಗುತ್ತಿದ್ದೇವೆ ಧಾಮರ್ಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜದಲ್ಲಿ ಒಂದುಗೂಡಬಹುದಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಗೆ ಅಭಿಕ್ಷೇಕ, ಸತ್ಯನಾರಾಯಣ ಪೂಜೆ ಯೊಂದಿಗೆ ಸ್ವಾಮಿಗೆ ಬೆಣ್ಣೆ ಅಲಂಕಾರ ಗಮನ ಸೆಳೆದವು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮದಶರ್ಿಗಳಾದ ಸತ್ಯನಾರಾಯಣ ರಾಜು, ವಾಸುದೇವರಾಜು, ಜಯಸಿಂಹರಾಜು, ಆನಂದರಾಜು, ಕೆ.ಎನ್.ನರಸಿಂಹರಾಜು, ಜಗನ್ನಾಥರಾಜು ಸೇರಿದಂತೆ ಇತರರು ಇದ್ದರು ( ಚಿತ್ರ ಇದೆ)
 

Edited By

Raghavendra D.M

Reported By

Raghavendra D.M

Comments