ಕೆರೆ ರಕ್ಷಣೆ ನಮ್ಮೆಲ್ಲರ ಹೊಣೆ: ವೀರಭದ್ರಶಿವಾಚಾರ್ಯಸ್ವಾಮೀಜಿ
ಕೊರಟಗೆರೆ ಏ28:- ಕೆರೆಯಲ್ಲಿ ಅಂತರ್ಜಲ ವೃದ್ಧಿಸಿ ರೈತರಿಗೆ ಅನುಕೂಲವಾಗಬೇಕೆಂದು ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಣುವಿನಕುರಿಕೆ ಗ್ರಾಮದ ಪುರಾತನ ಇತಿಹಾಸವಿರುವ ಸುಮಾರು 80 ಎಕರೆ ವಿಸ್ತೀರ್ಣದಲ್ಲಿ ನಿಮರ್ಾಣವಾಗಿರುವ ಅನೇಕ ವರ್ಷಗಳಿಂದ ಕೆರೆಯಲ್ಲಿ ಹೊಳುತುಂಬಿ ಕೆರೆಯಲ್ಲಿ ನೀರು ಶೇಖರಣೆ ಆಗದೆ ಇದ್ದ ಕೆರೆಯಲ್ಲಿ ಸಾರ್ವಜನಿರ ಸಹಕಾರದಲ್ಲಿ ಹೊಳು ತೆಗೆಸುವ ಕಾರ್ಯಕ್ರಮ ಕಳೆದ 10 ದಿನ ಗಳಿಂದ ಯಶಸ್ವಿಯಾಗಿ ನಡೆಯತ್ತಿರುವುದನ್ನು ಪರಿಶೀಲಿಸಿ ಮಾತನಾಡಿದರು.
ಭಕ್ತರ ಸಹಕಾರದಿಂದ ಮತ್ತು ತಾಲೂಕಿನ ಸಮಾಜದ ಕಳಕಳಿಯಿರುವಂತಹ ಜನರಿಂದ ಬಿಕ್ಷಾಟನೆಯನ್ನು ಮಾಡಿ ಕೆರೆ ಹೂಳು ಎತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದು ಮೊದಲನೆಯದಾಗಿ ಕೊರಟಗೆರೆ ತಾಲೂಕಿನಲ್ಲಿ ಪ್ರಾರಂಭಿಸಿದ್ದು ಇದು ಇಡೀ ರಾಜ್ಯ ವ್ಯಾಪ್ತಿಯಾಗಿ ವಿಸ್ತರಿಸುವಂತಹ ಯೋಜನೆಯನ್ನು ಮಠ ರೂಪಿಸಿಕೊಂಡಿದ್ದು ಇದಕ್ಕೆ ಭಕ್ತರ ಸಹಕರಿಸಬೇಕು ಎಂದರು.
ಸ್ಥಳೀಯ ರೈತರು ಮತ್ತು ಸಮಾಜಮುಖಿ ಜನನಾಯಕರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡು ತ್ತಿದ್ದು ಕಳೆದ 10 ದಿನಗಳಿಂದ ತೆಗೆದ ಫಲವತ್ತಾದ ಕೆರೆಹೊಳಿನ 6 ಸಾವಿರಕ್ಕೂ ಹೆಚ್ಚು ಟ್ಯಾಕ್ಟರ್ ಮಣ್ಣು ಕೆರೆಯ ಸಾಗುವಳಿ ರೈತರ ಜಮೀನಿಗೆ ಸಾಗಿಲಾಗಿದ್ದು ನಂತರ ಸುತ್ತಮುತ್ತಲ ರೈತರ ಜಮೀನುಗಳಿಗೂ ಮಣ್ಣು ಸಾಗಿಸುತ್ತಿರುವುದಾಗಿ ಹೇಳಿದರು.
ಬರಮುಕ್ತಭಾರತ ಯೋಜನೆಯ ಜಿಲ್ಲಾಸಂಚಾಲಕ ಯತಿರಾಜು ಮಾತನಾಡಿ ಸಕರ್ಾರ ಮಾಡಬೇಕಾದ ಅಂತರ್ಜಲ ವೃದ್ದಿಯೊಂದಿಗೆ ಪರಿಸರ ಸಂರಕ್ಷಣೆಯಂರತಹ ಜನಪರ ಕಾರ್ಯಕ್ರಮಕ್ಕೆ ಶ್ರೀಗಳು ಮುಂದಾಗಿದ್ದು ಶ್ಲಾಘನೀಯವಾಗಿದ್ದು ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಡಾ.ಸಿದ್ದಗಂಗಯ್ಯಹೊಲತಾಳು, ಇಂಜಿನಿಯರ್ ಮಂಜುನಾಥ್, ಶ್ರೀಸಿದ್ದರಬೆಟ್ಟ ಸಿದ್ದೇಶ್ವರಸ್ವಾಮಿ ಜಲತರು ಸಂವರ್ದನಾ ಸಮಿತಿ ಕಾರ್ಯಾಧ್ಯಕ್ಷ ಪಿ.ಆರ್ ಪರ್ವತಯ್ಯ, ಉಪಾದ್ಯಕ್ಷ ಎಸ್. ಪವನ್ಕುಮಾರ್, ಶ್ರೀಪ್ರಸಾದ್ ಕಾರ್ಯದಶಿ ಸಿದ್ದಗಿರಿ ನಂಜುಂಡಸ್ವಾಮಿ, ಮಣುವಿನಕುರಿಕೆ ಕೆರೆ ಸಮಿತಿಯ ಅಧ್ಯಕ್ಷ ಲೋಕೇಶ್,ಕಾರ್ಯದಶರ್ಿ ಪುಟ್ಟಶಾಮಣ್ಣ, ಖಜಾಂಚಿ ಪ್ರಕಾಶ್, ಸಮಿತಿಯ ಸದಸ್ಯರುಗಳಾದ ಎನ್.ಪದ್ಮನಾಭ್, ಪದ್ಮರಾಜು, ಕೆ.ವಿ ಪುರುಷೋತ್ತಮ್, ನಟರಾಜು, ಎಂ.ಎನ್.ಲೋಕೇಶ್, ಎಂ.ಪಿ.ಪುಟ್ಟಶಾಮಯ್ಯ, ಎಂ.ವಿ.ಪ್ರಕಾಶ್, ಕಾಳಪ್ಪ, ಗೊಲ್ಲರಹಟ್ಟಿ ನಾಗಭೂಷಣ್, ಬಂಡೇಹಳ್ಳಿ ಶಿವಣ್ಣ, ಜುಂಜರಾಮನಹಳ್ಳಿ ವೆಂಕಟಪ್ಪ, ಶ್ರೀರಂಗಯ್ಯ, ಹೋರಿಕುಮಾರ್ ಸೇರಿದಂತೆ ಇನ್ನಿತರ ಕೆರೆಯ ಅಚ್ಚುಕಟ್ಟು ರೈತರು ಇದ್ದರು.
Comments