ಕರಗದ ಪ್ರಯುಕ್ತ 25ನೇ ವರ್ಷದ ಅನ್ನಸಂತರ್ಪಣಾ ಕಾರ್ಯಕ್ರಮಕ್ಕೆ ಚಾಲನೆ

29 Apr 2018 1:17 PM |
573 Report

ನಗರದಲ್ಲಿರುವ ಲೋಕಸೇವಾನಿರತ ಶ್ರೀ ಡಿ.ಕೊಂಗಾಡಿಯಪ್ಪ ಹಳೇ ಬಸ್ ನಿಲ್ದಾಣದಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಕರಗದ ಪ್ರಯುಕ್ತ ಬಸ್ ಮಾಲೀಕರು,ಕಾರ್ಮಿಕರು ಹಾಗೂ ಬಸ್ ನಿಲ್ದಾಣದ ವರ್ತಕರು ಮತ್ತು ಪ್ರಮುಖ ದಾನಿಗಳ ನೆರವಿನೊಂದಿಗೆ ಯಶಸ್ವಿಯಾಗಿ ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ನೆಡೆಸಿಕೊಂಡು ಬರುತ್ತಿದ್ದಾರೆ. ಈ ದಿನ ದ್ರೌಪದಮ್ಮನವರ ಕರಗದ ಅಂಗವಾಗಿ ಮಧ್ಯಾನ್ಹ 12-30 ಕ್ಕೆ ಪೂಜಾಕಾರ್ಯಕ್ರಮ ಸಂಬ್ರಮದಿಂದ ಜರುಗಿತು, ನಗರದ ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು, ಟೌನ್ ಸಬ್ ಇನ್ಸ್ಪೆಕ್ಟರ್ ಎಂ.ಬಿ.ಪಾಟಿಲ್, ಪ್ರಶಾಂತ್ ಕುಮಾರ್, ಎಸ್.ಎನ್. ಬಸ್ ಮಾಲೀಕರು, ನಗರಸಭಾ ಸದಸ್ಯ ಎಂ.ಶಿವಕುಮಾರ್ ಮತ್ತಿತರ ಗಣ್ಯರು ಹಾಜರಿದ್ದು ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು. ಬಸ್ ಮಾಲೀಕರ ಸಂಘದ ಎಲ್ಲಾ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

Edited By

Ramesh

Reported By

Ramesh

Comments