ಜಮೀರ್ ಅಹಮದ್ ಗೆ ಸೆಡ್ಡು ಹೊಡೆಯಲು ದೇವೇಗೌಡ್ರ ಸಖತ್ ಮಾಸ್ಟರ್ ಪ್ಲಾನ್....!!



ಈಗಾಗಲೇ ಮತದಾನದ ದಿನಾಂಕ ನಿಗಧಿಯಾಗಿದ್ದು, ಮತದಾನಕ್ಕೆ ಸಕಲ ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನನ್ನನ್ನು ಅಲುಗಾಡಿಸುವವರು ಯಾರು ಇಲ್ಲ ಎಂದು ಬೀಗುತ್ತಿದ್ದ ಜಮೀರ್ ಅಹಮದ್ ಇದೀಗ ತಾನು ಬೆಳೆದ ಜೆ.ಡಿ.ಎಸ್ ಪಕ್ಷವನ್ನು ತೊರೆದು ಕೈ ಪಕ್ಷವನ್ನು ಸೇರಿದ್ದಾರೆ.ಅಷ್ಟೆ ಅಲ್ಲದೆ ಜೆ.ಡಿ.ಎಸ್ ಪಕ್ಷದ ಬಗ್ಗೆ ಹಲವಾರು ರೀತಿಯ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದನ್ನೆಲ್ಲವನ್ನೂ ಮೌನದಿಂದಲೇ ಆಲಿಸುತ್ತಿದ್ದ ದೇವೆಗೌಡರು ಸಖತ್ ಆಗಿಯೇ ಜಮೀರ್ ಅಹಮದ್ ಅವರಿಗೆ ಜರ್ಕ್ ಹೊಡೆಯುವಂತೆ ಮಾಡಿದ್ದಾರೆ.
ಚಾಮರಾಜಪೇಟೆಯಲ್ಲಿ ಜೆ.ಡಿ.ಎಸ್ ನಿಂದ ಸ್ಪರ್ಥಿಸುತ್ತಿರುವ ಅಲ್ತಾಫ್ ಖಾನ್ ಅವರ ಹವಾ ಸಿಕ್ಕಾಪಟ್ಟೆ ಜೋರಾಗಿದೆ. ಎಲ್ಲಾ ವರ್ಗದ ಜನರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿರುವ ಇವರು ಜನಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನಶಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಮೀರ್ ಅಹಮದ್ ಹಾಗೂ ಅಲ್ತಾಫ್ ಖಾನ್ ನ ರಾಜಕೀಯ ಗುದ್ದಾಟ ಜೋರಾಗಿಯೇ ಇದೆ. ಈ ಎರಡು ಟಗರುಗಳು ಕಣಕ್ಕೆ ಇಳಿದು ಟೊಂಕ ಕಟ್ಟಿ ಗುದ್ದಾಡಲು ಸಿದ್ದವಾಗಿವೆ. ಜೆಡಿಎಸ್ ಅಭ್ಯರ್ಥಿಯಾದ ಅಲ್ತಾಫ್ ಖಾನ್ ನ ಚಾಮರಾಜನಗರ ಕ್ಷೇತ್ರದಲ್ಲಿ ಗೆಲ್ಲಿಸಲೇಬೇಕು ಎಂದು ದೇವೆಗೌಡರು ಸಖತ್ ಆಗಿರೋ ಮಾಸ್ಟರ್ ಪ್ಲಾನ್ ರೆಡಿಮಾಡಿಕೊಂಡಿದ್ದಾರೆ.
ಚಾಮರಾಜನಗರದಲ್ಲಿ ಮುಸ್ಲಿಂ ಮತದಾರರು ಹೆಚ್ಚು.. ಹಾಗಾಗಿ ಜಮೀರ್ ಅಹಮದ್ ನನಗೆ ಗೆಲುವು ಖಚಿತ ಅಂತ ಫಿಕ್ಸ್ ಆಗಿಬಿಟ್ಟಿದ್ದಾರೆ. ದೇವೆಗೌಡರು ಜಮೀರ್ ನನ್ನು ಮಣಿಸಲೇ ಬೇಕು ಅಂತ ಫ್ಲಾನ್ ಮಾಡುತ್ತಿದ್ದಾರೆ. ಹಾಗಾಗಿಯೇ ಅವರು ಜೆಡಿಎಸ್ ನ ಪರ ಮುಸ್ಲಿಂ ಐಕಾನ್ ಆಗಿರುವ ಎಐಎಮ್ಐಎಮ್ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಅವರಿಂದ ಅಲ್ತಾಫ್ ಖಾನ್ ಪರ ಪ್ರಚಾರ ಮಾಡಿಸಲು ಜೆಡಿಎಸ್ ವರಿಷ್ಟರು ಆಮಂತ್ರಣವನ್ನು ನೀಡಿದ್ದಾರೆ. ಅಸಾದುದ್ದೀನ್ ಕೂಡ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ಧಾರೆ. ರಾಜ್ಯ ರಾಜಕೀಯದಲ್ಲಿ ಗೆದ್ದು ಅಧಿಕಾರಕ್ಕೆ ಬರಲೆ ಬೇಕು ಅಂತ ಮಾಸ್ಟರ್ ಪ್ಲಾನ್ ನೊಂದಿಗೆ ಮುಂದಾಗಿದ್ದಾರೆ ದೇವೇಗೌಡ್ರು.
ಎಐಎಂಐಎಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸತ್ ಸದಸ್ಯ ಅಸಾದುದ್ದೀನ್ ಓವೈಸಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮೇ 1 ರಂದು ಚುನಾವಣಾ ಪ್ರಚಾರದಲ್ಲಿ ಓವೈಸಿ ಪಾಲ್ಗೊಳ್ಳಲಿದ್ದಾರೆ ಎಂದು ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಿಕ್ಕಪೇಟೆ-ಡಾ.ಡಿ.ಹೇಮಚಂದ್ರಸಾಗರ್, ಪುಲಕೇಶಿನಗರ-ಬಿ.ಪ್ರಸನ್ನ ಕುಮಾರ್, ಸರ್ವಜ್ಞನಗರ-ಅನ್ವರ್ ಶರೀಫ್, ಚಾಮರಾಜಪೇಟೆ- ಬಿ.ಕೆ.ಅಲ್ತಾಫ್‍ಖಾನ್ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಓವೈಸಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಓವೈಸಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Comments