ಅಪ್ಪ-ಮಗನ ಘರ್ಜನೆಗೆ ಬೆಚ್ಚಿಬಿದ್ದ ಬಾಲಕೃಷ್ಣ
ಮಾಗಡಿ ಕಾಂಗ್ರೆಸ್ ಅಭ್ಯರ್ಥಿಯಾದ ಹೆಚ್.ಸಿ.ಬಾಲಕೃಷ್ಣ ಸಿಡಿ ವಿಚಾರವಾಗಿ ಇದೀಗ ಉಲ್ಟಾ ಹೊಡೆದಿದ್ದಾರೆ. ಇತ್ತಿಚಿಗಷ್ಟೆ ನಿಖಿಲ್ ಪರವಾಧ ಕೆಲವು ಸಿಡಿಗಳು ನನ್ನ ಬಳಿ ಇವೆ ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ ಇದೀಗ ಅವರೆ ಉಲ್ಟಾ ಹೊಡೆದಿದ್ದಾರೆ.
ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಬಾಲಕೃಷ್ಣ ಅದೆಂಥಾ ಬಾಂಬ್ ಸಿಡಿಸ್ತಾರೆ ನಾನು ನೋಡ್ತೀನಿ. ಅವರು ಹೇಳಿದಂತೆ ನಿಖಿಲ್ ಬಗ್ಗೆ ಸಾಕ್ಷಿ ಇದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಬಾಲಕೃಷ್ಣಗೆ ಸವಾಲ್ ಹಾಕಿದ್ದಾರೆ.ಇನ್ನು ಬಿಡದಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಾಗಡಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು. ತಾಕತ್ ಇದ್ರೆ ಬಿಡುಗಡೆ ಮಾಡ್ಲಿ. ಅವ್ರ ಯೋಗ್ಯತೆ ರಾಜ್ಯದ ಆರೂವರೆ ಕೋಟಿ ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು. ಅವ್ರು ಬೆನ್ನಿಗೆ ಚೂರಿ ಹಾಕಿ ಹೋದವ್ರು, ನಮ್ಮ ಜಾತಕ ಏನ್ ಬಿಡುಗಡೆ ಮಾಡ್ತಾರೆ ಎಂದು ನಿಖಿಲ್ ಸವಾಲು ಹಾಕಿದ್ದಾರೆ. ಅಪ್ಪ-ಮಗನ ಘರ್ಜನೆಗೆ ಬೆಚ್ಚಿಬಿದ್ದ ಹೆಚ್.ಸಿ.ಬಾಲಕೃಷ್ಣ ಇದೀಗ ಹೊಡೆದಿದ್ದಾರೆ.
ಹೌದು.., ಹೆಚ್.ಸಿ.ಬಾಲಕೃಷ್ಣ ಇಂದು ಉಲ್ಟಾ ಹೊಡೆದಿದ್ದು ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಹೇಳೆ ಇಲ್ಲ… ನನ್ನ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಹೇಳಿದ್ದೇನೆ ಅದನ್ನ ನೀವೆಲ್ಲಾ ತಪ್ಪಾಗಿ ಅರ್ಥೈಸಿಕೊಂಡಿದ್ದೀರಾ ಎಂದು ಹೇಳಿದರು. ದೇವೆಗೌಡ ಮತ್ತು ಕುಮಾರಸ್ವಾಮಿಯವರಿಗೆ ನನ್ನ ಬಗ್ಗೆ ಮಾತನಾಡುವ ಅಧಿಕಾರವಿದೆ, ಅವರು ದೊಡ್ಡವರು ಎಂದು ಬಾಲಕೃಷ್ಣ ತಿಳಿಸಿದ್ದಾರೆ.
Comments