ಸಿಡಿ ಬಿಡುಗಡೆ ವಿಚಾರ ಕುರಿತು ಬಾಲಕೃಷ್ಣ ಗೆ ಸವಾಲೆಸೆದ ಎಚ್'ಡಿಕೆ - ನಿಖಿಲ್

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ರಾಜಕೀಯ ರಂಗೇರುತ್ತಿದೆ. ಸಿಡಿ ಬಿಡುಗಡೆ ವಿಚಾರ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಹಾಗೂ ಬಾಲಕೃಷ್ಣ ಮಧ್ಯೆ ತೀವ್ರ ಜಟಾಪಟಿಗೆ ಕಾರಣವಾಗಿದೆ.
ಮಂಡ್ಯದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಬಾಲಕೃಷ್ಣ ಅದೆಂಥಾ ಬಾಂಬ್ ಸಿಡಿಸ್ತಾರೆ ನಾನು ನೋಡ್ತೀನಿ. ಅವರು ಹೇಳಿದಂತೆ ನಿಖಿಲ್ ಬಗ್ಗೆ ಸಾಕ್ಷಿ ಇದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಬಾಲಕೃಷ್ಣಗೆ ಸವಾಲ್ ಹಾಕಿದ್ದಾರೆ.ಇನ್ನು ಬಿಡದಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಾಗಡಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದರು. ತಾಕತ್ ಇದ್ರೆ ಬಿಡುಗಡೆ ಮಾಡ್ಲಿ. ಅವ್ರ ಯೋಗ್ಯತೆ ರಾಜ್ಯದ ಆರೂವರೆ ಕೋಟಿ ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು. ಅವ್ರು ಬೆನ್ನಿಗೆ ಚೂರಿ ಹಾಕಿ ಹೋದವ್ರು, ನಮ್ಮ ಜಾತಕ ಏನ್ ಬಿಡುಗಡೆ ಮಾಡ್ತಾರೆ ಎಂದು ನಿಖಿಲ್ ಸವಾಲು ಹಾಕಿದ್ದಾರೆ.
Comments